Home ಜಿಲ್ಲೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಸೇವಾ ನಿವೃತ್ತಿ ಅಭಿನಂದನಾ ಸಮಾರಂಭ

ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಸೇವಾ ನಿವೃತ್ತಿ ಅಭಿನಂದನಾ ಸಮಾರಂಭ

ನವಲಗುAದ,ಆ..೩೦: ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರುಗಳಿಗೆ ಗೌರವ ಸಲ್ಲಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಪಂಚಗೃಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಸ್ಥಳೀಯ ಮಾಡೆಲ್ ಹೈಸ್ಕೂಲ್ ೨೦೧೬-೧೭ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಶಿಕ್ಷಕ ಆರ್.ಎಸ್. ಪಾಟೀಲ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಾಲೆ ಪ್ರದಾನಗುರು ಜಿ ಎಂ ಮಾಕಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸ್ನೇಹ ಪುನರ್ಮಿಲನ ಹಾಗೂ ಸೇವಾ ನಿವೃತ್ತಿ ಕಾರ್ಯಕ್ರಮವೂ ವಿಶೇಷವಾಗಿದೆ. ಶಾಲೆಯಲ್ಲಿ ಜೊತೆಯಾಗಿ ಕಲಿತವರು ಇಂದು ತಮ್ಮ ತಮ್ಮ ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇದ್ದರೂ, ನಮ್ಮನ್ನು ಒಂದುಗೂಡಿಸಿದೆ. ಶಾಲೆ, ಗುರುಗಳು ಮತ್ತು ಸ್ನೇಹ. ಎಷ್ಟೇ ವರ್ಷಗಳು ಕಳೆದರೂ ಬಾಲ್ಯದ ಸ್ನೇಹದ ನೆನಪುಗಳು ಮಾಸುವುದಿಲ್ಲ ಎಂದರು.

ಆರ್ ಎಸ್ ಪಾಟೀಲ್ ಅಭಿನಂದನೆ ಸ್ವೀಕರಿಸಿ ಮಾತನಾಡಿ ಇಂದಿನ ಕಾರ್ಯಕ್ರಮ ನಾನು ಎಂದು ಮರೆಯದ ದಿನ ಗುರು-ಶಿಷ್ಯರ ಬಾಂಧವ್ಯ ಹಾಗೂ ಸ್ನೇಹದ ಸಂಬAಧವನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದರು.

ಹಳೆಯ ವಿದ್ಯಾರ್ಥಿಗಳು ಮಾತನಾಡಿ ಆರ್. ಎಸ್. ಪಾಟೀಲ್ ಅವರು ಕೇವಲ ಪಾಠ ಬೋಧಿಸುವವರಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಅಭಿಪ್ರಾಯಪಟ್ಟರು.

ಬೋಧಕ ಬೋಧಕೇತರ ಹಾಗೂ ಸಿಬ್ಬಂದಿಗಳಾದ ಎಸ್.ಎಂ.ದೊಡ್ಡಮನಿ, ಸಿ ಎಂ ಕಟಗಿ, ಎಸ್ ಬಿ ಕಲಾವಂತ, ಎಸ್.ಬಿ.ತೋಟಿ, ಸಿದ್ದಪ್ಪ ಬಾರಕೇರ,ಎಸ್.ಎನ್. ಲಮಾಣಿ, ಹೆಚ್.ಆರ್. ಚಂದ್ರಣ್ಣವರ, ಎಸ್.ಎನ್. ಮುಷ್ಠಿಗೇರಿ, ಜಿ.ಎಂ.ಮುಕ್ರಿ, ಎ. ಎಂ.ಜಮಖಾನ, ಎಂ ಪಿ ಲಕ್ಕುಂಡಿ, ಯು.ಎಸ್. ಪೂಜಾರ,ಅಲ್ಕಾ ಕೇದಾರಿ, ಉಮೇಶ್ ಕರಿಕಾಯಿ,ನೇತ್ರಾ ಭಜಂತ್ರಿ, ದಿವ್ಯಶ್ರೀ ಸವದತ್ತಿ, ವಿ.ಬಿ.ಜಕ್ಕನಗೌಡ್ರ, ಯಶವಂತ ಚಿಪ್ಪಾಡಿ, ಮಾಬುಸಾಬ ಸವದತ್ತಿ, ಮಂಜುನಾಥ ಸಂಶಿ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು. ೨೦೧೬-೧೭ನೇ ಸಾಲಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು