Home ಜಿಲ್ಲೆ ಅಂಗನವಾಡಿ-ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ

ಅಂಗನವಾಡಿ-ಆರೋಗ್ಯ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ

ಚನ್ನಮ್ಮನ ಕಿತ್ತೂರು,ಆ ೩೦: ಪಟ್ಟಣದ ಅಂಗನವಾಡಿ ಕೇಂದ್ರಕ್ಕೆ ಸಿವಿಲ್ ನ್ಯಾಯಾದೀಶ ಮೊಹಮ್ಮದಲಿ ನಾಯಕರವರು ದಿಢೀರ್ ಭೇಟಿನೀಡಿ ದಾಖಲೆಗಳನ್ನು ಮತ್ತು ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರದ ಪ್ರಮಾಣ, ಮೊಟ್ಟೆ, ಅಕ್ಕಿ, ಬೆಳೆ ದಾಸ್ತಾನು ಮಕ್ಕಳು ಕುಳಿತುಕೊಳ್ಳುವ ಜಾಗೆ, ಅಡುಗೆಮನೆ, ಆಹಾರ ತಯಾರಿಕೆ ಕ್ರಮ ಇತ್ಯಾದಿ ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.


ನಂತರ ಅವರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ಹೆರಿಗೆ ವಾಡ್, ಔಷಧ ವಿತರಣಾ ಕೇಂದ್ರ, ಒಳ ಮತ್ತು ಹೊರ ರೋಗಿಗಳ ವಾರ್ಡ, ಆರೋಗ್ಯ ಕೇಂದ್ರದ ಪ್ರತಿಯೊಂದು ವಿಭಾಗಗಳನ್ನು ಪರಿಶೀಲಿಸಿ ಸ್ವಚ್ಛತೆ, ಚಿಕಿತ್ಸೆ ನೀಡುವ ಸ್ಥಳ, ಹೀಗೆ ಹತ್ತು ಹಲವಾರು ಆರೋಗ್ಯಕ್ಕೆ ಸಂಬAಧಿಸಿದ ಕೊಠಡಿಗಳನ್ನು ವಿಕ್ಷೀಸಿ ರೋಗಿಗಳ ಮೂಲಕ ಅಲ್ಲಿರುವ ವ್ಯವಸ್ಥೆಯ ಮಾಹಿತಿ ತೆಗೆದುಕೊಂಡು ಮಾತನಾಡಿ ಇಲ್ಲಿ ಯಾವುದಕ್ಕೂ ಹಣ ನೀಡುವಂತಿಲ್ಲ. ಸರ್ಕಾರದಿಂದ ಉಚಿತವಾಗಿ ಬಡರೋಗಿಗಳ ಅನುಕೂಲಕ್ಕಾಗಿ ಔಷಧಿ ಸಿಗುತ್ತದೆ. ಇದು ದುರುಪಯೋಗವಾಗದೇ ಉಪಯೋಗವಾಗಬೇಕು. ಮತ್ತು ಸ್ವಚ್ಚತೆ ಕಾಪಾಡಬೇಕೆಂದು ವೈದ್ಯಾಧಿಕಾರಿಗಳಿಗೆ ಹೇಳಿದರು.


ಈ ವೇಳೆ ಆರೋಗ್ಯ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು, ಕೋರ್ಟ ಸಿಬ್ಬಂದಿ ಇತರರಿದ್ದರು.