Home ಜಿಲ್ಲೆ ಶ್ರೀ ಗುರು ರಾಯರ ಆರಾಧನಾ ಮಹೋತ್ಸವ ಆರಂಭ

ಶ್ರೀ ಗುರು ರಾಯರ ಆರಾಧನಾ ಮಹೋತ್ಸವ ಆರಂಭ

ಲಕ್ಷೆö್ಮÃಶ್ವರ,ಆ೩೦ ಸುಮಾರು ೩೦೬ ವರ್ಷಗಳ ಇತಿಹಾಸವನ್ನು ಹೊಂದಿರುವ ಪಟ್ಟಣದ ಗುರು ರಾಘವೇಂದ್ರಸ್ವಾಮಿಗಳ ಮಠದ ಆರಾಧನೆ ಕಾರ್ಯಕ್ರಮದ ಪೂಜೆ ಪುನಸ್ಕಾರಗಳು ಸಂಪ್ರದಾಯದAತೆ ಪ್ರಾರಂಭಗೊAಡಿವೆ.


ಮೊದಲ ದಿನವಾದ ಶನಿವಾರ ಬೆಳಿಗ್ಗೆಯಿಂದಲೆ ಆರಾಧನೆ ನಿಮಿತ್ಯ ಶ್ರೀಮಠಕ್ಕೆ ಜನರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ರಾಯರ ದರ್ಶನವನ್ನು ಕೈಗೊಂಡರು, ಹೊಂಬಳ ಮನೆತನದವರಿಂದ ಪೂಜಿಸ್ಪಡುತ್ತಿರುವ ಈ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ವೈಭವೋತವಾಗಿ ನಡೆಯುತ್ತಿದ್ದು, ೩೦೬ ವರ್ಷದ ಆರಾಧನಾ ಮಹೋತ್ಸವವು ಶನಿವಾರ ಶ್ರೀಮಠದಲ್ಲಿ ರಾಘವೇಂದ್ರ ಸ್ತೊçÃತ್ತç, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪುರಾಣ, ಪಾರಾಯಣಗಳು ನಡೆದು ನಂತರ ಶ್ರೀ ರಾಯರ ಮೃತ್ತಿಕಾ ಬೃಂದಾವನಕ್ಕೆ ಹೂವಿನ ಅಲಂಕಾರವನ್ನು ನೆರವೇರಿಸಲಾಯಿತು.


ಧರ್ಮದರ್ಶಿಗಳಾದ ಹನುಮಂತಾಚಾರ್ಯ ಹೊಂಬಳ ಅವರ ನೇತೃತ್ವದಲ್ಲಿ ಸಹೋದರಾದ ವೇದವ್ಯಾಸ ಹೊಂಬಳ, ಮೋಹನ ಹೊಂಬಳ, ಮನೋಜ ಹೊಂಬಳ, ಶ್ರೀಪಾದರಾಜ ಹೊಂಬಳ ಅವರು ವಿಶೇಷ ಪೂಜೆ ನೆರವೇರಿಸಿದರು. ನಂತರ ಮದ್ಯಾಹ್ನ ಮಹಾಪ್ರಸಾದ ಸೇವೆ ನಡೆದು ಸಾವಿರಾರು ಜನರು ಪಾಲ್ಗೊಂಡಿದ್ದರು.