
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜು.10:- ಒಕ್ಕಲಿಗ ಸಮುದಾಯದವರು ಅತಿ ಸೂಕ್ಷ್ಮಾತಿ ಸೂಕ್ಷ್ಮ ಸಮಾಜ ಸೇರಿದಂತೆ ಎಲ್ಲಾ ಸಮುದಾಯದವರನ್ನು ಗುರುತಿಸಿ ಬೆನ್ನೆಲುಬಾಗಿ ನಿಂತು ಸಮಾಜದಲ್ಲಿ ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನ ಚಂದಗಾಲು ಗ್ರಾಮದಲ್ಲಿ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಒಕ್ಕಲಿಗ ಸಮುದಾಯ ಭವನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು
ಒಕ್ಕಲಿಗ ಸಮಾಜದವರನ್ನು ಗುರುತಿಸಿ ಪುರಸ್ಕಾರ ಮಾಡುವುದಕ್ಕಿಂತ ಎಲ್ಲಾ ಸಮಾಜದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರೆ ಸಮಾಜದಲ್ಲಿ ಜಾತಿ ಭೇದ ತೊಡೆದು ಹಾಕಿ ಸಾಮರಸ್ಯದ ಸಂದೇಶ್ ಕೊಟ್ಟಾಂತಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಎರಡಕ್ಕೂಲು ಲಕ್ಷ ಮತದಾರರು ಇದ್ದಾರೆ ಈ ಪೈಕಿ ಅರವತ್ತು ಸಾವಿರ ಒಕ್ಕಲಿಗರ ಸಮುದಾಯದ ಮತದಾರರು ಇದ್ದರೆ ಇನ್ನೂ 1.55 ಲಕ್ಷ ಎಲ್ಲಾ ಸಮುದಾಯಗಳ ಮತದಾರರು ಇದ್ದಾರೆ, ಇದರಲ್ಲಿ ಎಲ್ಲಾ ಸಮುದಾಯದ ಮತದಾರರು ನನ್ನನ್ನು ಗುರುತಿಸಿ ಮತ ನೀಡಿದ್ದರಿಂದ ಮೂ ಬಾರಿ ಶಾಸಕನಾಗಿ ಮಂತ್ರಿಯಾಗಿದ್ದು ಹಾಗಾಗಿ ಒಕ್ಕಲಿಗ ಸಮುದಾಯದವರು ಎಲ್ಲ ಸಮುದಾಯದವರನ್ನು ಪ್ರೀತಿ ವಿಶ್ವಾಸದಿಂದ ಕಾಣಿ ಎಂದು ನುಡಿದರು.
ಕೆ.ಆರ್.ನಗರ ಪಟ್ಟಣದಲ್ಲಿ ಒಕ್ಕಲಿಗ ಸಮುದಾಯ ಭವನವನ್ನು ಮಿರ್ಲೆ ಅಣ್ಣೇಗೌಡರ ನೇತೃತ್ವದಲ್ಲಿ ಕಟ್ಟಲಾಯಿತು. ವೈಯಕ್ತಿಕವಾಗಿ ಒಂದು ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇನೆ ಎಂದು ಸ್ಮರಿಸಿದ ಸಾ.ರಾ.ಮಹೇಶ್ ಅವರು ಬಹಳ ಅಚ್ಚುಕಟ್ಟಾಗಿ ಕಟ್ಟಿದ್ದಾರೆ ಒಕ್ಕಲಿಗ ಸಮುದಾಯ ಭವನಕ್ಕೆ ಮಾಜಿ ಪ್ರಧಾನ ಮಂತ್ರಿ ಹಾಗೂ ಸಮುದಾಯದ ಪ್ರಭಾವಿ ನಾಯಕರಾದ ಹೆಚ್.ಡಿ.ದೇವೇಗೌಡರ ಹೆಸರು ಇಡಲು ಚರ್ಚೆ ನಡೆದಾಗ ಕೆಲವರು ವಿರೋಧ ಮಾಡಿದರು, ಆದರೆ ಹೆಚ್.ಡಿ.ದೇವೇಗೌಡರ ಸಮಾಜದ ಆಸ್ತಿ ಆದ್ದರಿಂದ ಅವರ ಹೆಸರನ್ನು ಸಮುದಾಯ ಭವನಕ್ಕೆ ಇಟ್ಟು ಉದ್ಘಾಟನೆ ಕೂಡ ಮಾಡಲಾಯಿತು ಎಂದು ತಿಳಿಸಿದರು.
ಚಂದಗಾಲು ಗ್ರಾಮದ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ ಎಂದರಲ್ಲದೆ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ ಅವರುಗಳು ತಲಾ ಒಂದು ಲಕ್ಷ ವಯಕ್ತಿಕವಾಗಿ ದೇಣಿಗೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ನಿವೃತ್ತ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಸಹಾಯಕ ನಿರ್ದೇಶಕ ಸಿ.ಎಸ್.ಸುದರ್ಶನ್, ತಾಲೂಕು ಒಕ್ಕಲಿಗರ ಸಂಘ ಗೌರವಾಧ್ಯಕ್ಣ ಮಿರ್ಲೆ ಅಣ್ಣೇಗೌಡ, ಅಧ್ಯಕ್ಷ ಶಿವರಾಮ್, ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಸಿ.ಎಸ್.ರಾಮಲಿಂಗು, ನವನಗರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ನಿರ್ಧೆಶಕ ಕೇಶವ್, ತಾಲೂಕು ಜಾದಳ ವಕ್ತಾರ ಕೆ.ಎಲ್.ರಮೇಶ್, ಚಂದಗಾಲು ಗ್ರಾಮದ ಅಧ್ಯಕ್ಷ ಲೋಕೇಶ್, ಯಜಮಾನರಾದ ಮಂಜುನಾಥ್(ಅಣ್ಣಿ), ಗೌಡಪ್ಪ, ಜಗದೀಶ್, ಶಿವಣ್ಣ, ಲೋಕೇಶ್, ಗೋವಿಂದು, ದೇವೇಗೌಡ, ರವಿಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ, ಜೆಡಿಎಸ್ ತಾಲೂಕು ಅಧ್ಯಕ್ಷೆ ರಾಜಲಕ್ಷ್ಮಿ, ಪುರಸಭೆ ಮಾಜಿ ಸದಸ್ಯ ಕೆ.ಎಲ್.ಜಗದೀಶ್, ನಿವೃತ್ತ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಿ.ಟಿ.ರಾಮಚಂದ್ರ, ಡಿಂಡಿಮ, ಪೆÇೀಟೋ ರಾಘು, ಭಾಗವಹಿಸಿದ್ದರು.

































