
ಬೆಂಗಳೂರು, ಆ. 24- ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಅಬ್ಬಿಗೆರೆ ಬೆಂಗಳೂರು ಇವರ ಸಹಯೋಗದಲ್ಲಿ, ನಿನ್ನೆ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಆರ್. ಶಾಂತಕುಮಾರ್ ಅವರು ವಹಿಸಿದ್ದರು. ರೋಟರಿ ಕ್ಲಬ್ ನ ಅಧ್ಯಕ್ಷರಾದ ವೆಂಕಟೇಶ್ವರಲು ರೆಡ್ಡಿ ಅವರು ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿದ್ದರು.
ಎನ್‍ಬಿಇಟಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಡಿ.ಎನ್ . ಹರಿದಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಕ್ಲಬ್‍ನ ಜೊತೆಗೂಡಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಆಶಯವನ್ನು ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ಕೆ.ನಾಗಭೂಷಣ ಅವರು ಮಾತನಾಡುತ್ತಾ “ಆರೋಗ್ಯವೇ ಭಾಗ್ಯ” ಎಂಬ ಮಾತನ್ನು ನೆನಪಿಸುತ್ತಾ ಆರೋಗ್ಯದ ಮಹತ್ವ ತಿಳಿಸಿದರು.
ರೋಟರಿ ಸಂಸ್ಥೆಯ ನಿರ್ದೇಶಕರಾದ ಜಗದೀಶ್ ರೆಡ್ಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಕಾರ್ಯದರ್ಶಿ ಸಂಗೀತಾ ಸಾಳುಂಕೆ ಅವರು ವಂದನಾರ್ಪಣೆ ಮಾಡಿದರು.
ಎನ್‍ಬಿಇಟಿ ನಿರ್ದೇಶಕರಾದ ಮಂಜುನಾಥ ರಾವ್, ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಗಣ್ಯರು ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶಿಬಿರದಲ್ಲಿ ನಗರದ ಪ್ರತಿಷ್ಠಿತ ಫೆÇೀರ್ಟೀಸ್, ಶ್ರೀ ಸಾಯಿ ಮದರ್ & ಚೈಲ್ಡ್ ಹೆಲ್ತ್ ಕೇರ್ ಅಬ್ಬಿಗೆರೆ,ಓಂ ಕ್ಲಿನಿಕ್, ರೋಟರಿ ಆಸರೆ ಬ್ಲಡ್ ಡೋನೇಷನ್.ಆಸ್ಪತ್ರೆಗಳ 25 ಕ್ಕೂ ಹೆಚ್ಚು ವೈದ್ಯರು ತಪಾಸಣೆಯನ್ನು ನಡೆಸಿ ಕೊಟ್ಟರು.

































