
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.01: ಹೊಸ ಯರಗುಡಿಯ ಸರ್ಕಾರಿ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಅಕ್ಷಯ ಕಲಾ ಟ್ರಷ್ಟ ಹೊಸ ಯರಿಗುಡಿರವರು ಆಯೋಜಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ಶಿಕ್ಷಕಿಯಾದ ರೇಖ ರವರು ವಹಿಸಿದರು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳು ಅಕ್ಷಯಕಲಾ ಟ್ರಷ್ಟ ಅಧ್ಯಕ್ಷರಾದ ಸುಂಕಪ್ಪ ಅವರು ಮಾತಾನಾಡಿದ್ರು ನಂತರ ಶ್ರೀಮತಿ ಪಾರ್ವತಿ ಬಿ ಪ್ರಾಂಶುಪಾಲರು ರವರು, ವೇದಿಕೆ ಮೇಲಿರುವ ಎಲ್ಲಾ ಶಿಕ್ಷಕ, ಶಿಕ್ಷಕೀಯರು ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಟನೆ ಮಾಡಿದರು , ನಂತರ ಪ್ರಾಂಶುಪಾಲರು ಆದ ಶ್ರೀಮತಿ ಪಾರ್ವತಿ ಬಿ ವರು ಮಾತನಾಡಿ ನಮ್ಮ ಮೂಲ ಕಲೆ ಸಾಹಿತ್ಯಗಳು ಉಳಿವ ಸಲುವಾಗಿ ಸಾಂಸ್ಕೃತಿಕವಾಗಿ ಮಕ್ಕಳನ್ನು ತೊ ಡಗಿಸ ಬೇಕು ಎಂದು ಅವರು ಉದ್ಘಾಟನೆ ನುಡಿಗಳನ್ನು ಹೇಳಿದರು, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಸಂಗೀತ ಶಿಕ್ಷಕಿಯ ರಾದ ಶ್ರೀಮತಿ ರೇಖಾ ಮೇಡಂ ಅವರು ಮಾತನಾಡಿ ಕಲೆ ಸಾಹಿತ್ಯ ಮೂಲ ಕಲೆಗಳು ಉಳಿವಿಗಾಗಿ ನಾವು ಮಕ್ಕಳನ್ನ ಸೃಜನಶೀಲರಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು , ಆಯೋಜನೆ ಮಾಡಲಾಗಿದೆ ಲಾವಣ್ಯ ಮತ್ತು ತಂಡದವರಿಂದ ಜಾನಪದ ಗೀತೆಗಳು ಕಾರ್ಯಕ್ರಮ, ಮಂದಾರ ಮತ್ತು ತಂಡದವರು ಜಾನಪದ ನೃತ್ಯವನ್ನು ಮಾಡಿದರು, ಹುಲುಗಪ್ಪ ಎಸ್ ಎಮ್ ಮತ್ತು ತಂಡದವರಿಂದ ಜಾನಪದ ಗೀತೆಗಳು ನೆರೆದಿದ್ದ ಮಕ್ಕಳಿಗೆ ಮತ್ತು ಎಲ್ಲಾ ಶಿಕ್ಷಕರಿಗೆ ಆಧುನಿಕ ಜಗತ್ತಿನಲ್ಲಿ ನಶಿಸುವ ಕಲೆಗಳನ್ನ ತಮ್ಮ ಹಾಡಿನ ಮೂಲಕ ತಮ್ಮ ಮಾತನಾಡುವ ರಂಗ ಕೌಶಲ್ಯಗಳ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಮೆರಗು ತಂದರು ,ಕಾರ್ಯಕ್ರಮದಲ್ಲಿ ಕಲಾವಿದರಾದ ವಿಜಯ್, ತಮಟೆ ವಾದಕರು, ಹುಲುಗಪ್ಪ ಎಸ್ ಜಾನಪದ ಕಲಾವಿದರು,ಎಂ, ಶಿಕ್ಷಕರಾದ ಶ್ರೀಯುತ ನಾಗೇಶ್ ಪಟೇಲ್ ಸರ್ ಅವರು,ಶ್ರೀಮತಿ ಶ್ರೀಮತಿ ಫಾರಿದ ಬೇಗಂ,ಶ್ರೀಮತಿ , ವಿಮಲಾ ಮೇಡಂ ಶ್ರೀಮತಿ ಮಂಜುಳಾ ಮೇಡಂ, ಶ್ರೀಮತಿ ಚಾರಣ ಲಿಲ್ಲಿ ಗ್ರೇಸ್ , ಶ್ರೀಮತಿ ಶ್ರೀಮತಿ ರೇಖಾ ಸಂಗೀತ ಶಿಕ್ಷಕಿ, ಶ್ರೀ ಶೇಷಪ್ಪ, ಶ್ರೀ ವೆಂಕಟೇಶ್ವರ ರೆಡ್ಡಿ, ಶ್ರೀ ಹಿತ ನಾಗಲಿಂಗಪ್ಪ ದೈಹಿಕ ಶಿಕ್ಷಕರು , ಇನ್ನು, ಕಾರ್ಯಕ್ರಮದ ಆಯೋಜಕರಾದ ಹೆಚ್ ಜಿ ಸುಂಕಪ್ಪ ಮುಂತಾದವರೆಲ್ಲ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನಂತರ ನಾಗಲಿಂಗಪ್ಪನವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.





























