Home ಜಿಲ್ಲೆ ಕಲಬುರಗಿ ವಿದ್ಯಾನಗರದಲ್ಲಿ ಗುರುವೀರೇಶ್ವರರ ಪುರಾಣ ಪ್ರವಚನ

ವಿದ್ಯಾನಗರದಲ್ಲಿ ಗುರುವೀರೇಶ್ವರರ ಪುರಾಣ ಪ್ರವಚನ

ಕಲಬುರಗಿ,ಆ.1-ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಕಾಲೋನಿ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್ಫೇರ್ ಸೊಸೈಟಿ ವತಿಯಿಂದ ಈ ವರ್ಷದ ಶ್ರಾವಣ ಮಾಸದ ನಿಮಿತ್ಯ ಬಬಲಾದ, ಮುತ್ಯಾನ ಬಬಲಾದ ಎಂದೇ ಹೆಸರುವಾಸಿಯಾಗಿರುವ ಶ್ರೀ ಗುರು ಚನ್ನವೀರೇಶ್ವರರ ಪುರಾಣ ಪ್ರವಚನ ನಡೆÀಸಬೇಕೆಂದು ಜುಲೈ 26 ರಂದು ನಡೆದ ಸೊಸೈಟಿ ಸರ್ವ ಸದಸ್ಯರ ಪುರಾಣ ಪೂರ್ವ ಭಾವಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತೆಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆ ತಿಳಿಸಿದ್ದಾರೆ.
ಪುರಾಣ ಪ್ರವಚನಕಾರರಾದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ವೇ.ಮೂ. ವೀರಯ್ಯ ಶಾಸ್ತ್ರೀಗಳು ಪುರಾಣ ಪ್ರವಚನ ನಡೆಸಿಕೊಡಲಿದ್ದು, ಶಿವಕುಮಾರ ಎಂ. ಹಿರೇಮಠ ಜಾಲಹಳ್ಳಿ ಅವರು ಸಂಗೀತ ಹಾಗೂ ಗಾಯನ ಮಾಡಲಿದ್ದಾರೆ. ಅಡಿವೇಶಕುಮಾರ ಗೋಕಾಕ ಅವರು ತಬಲಾ ಸಾಥ್ ನೀಡಲಿದ್ದಾರೆ.
ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ, ಆಡಳಿತ ಮಂಡಳಿ ಸದಸ್ಯರಾದ ಉಮೇಶ ಶೆಟ್ಟಿ, ಬಿ. ಎನ್. ಪುಣ್ಯಶೆಟ್ಟಿ, ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ಮಲ್ಲಿಕಾರ್ಜುನ ಕಾಳೆ, ಕಾಶಿನಾಥ ಚಿನ್ಮಳ್ಳಿ, ಶ್ರೀಮಂತರಾವ ರಾಜಾಪೂರ, ಆದಪ್ಪ ಸಿಕೇದ್, ನಾಗರಾಜ ಹೆಬ್ಬಾಳ, ಸದಾಶಿವ ಕಂಠಿ, ಶಾಂತಯ್ಯ ಬೀದಿಮನಿ, ಆದಿಲಿಂಗಯ್ಯ ಕೊಡಳ್ಳಿ, ಸಂಗಮೇಶ ದಿವಟಗಿ, ನಾಗಭೂಷಣ ಹಿಂದೊಡ್ಡಿ, ನಾಗರಾಜ ಮುಗಳಿ, ವೀರೇಶ ನಾಗಶೆಟ್ಟಿ, ಉದಯಕುಮಾರ ಪಡಶೆಟ್ಟಿ, ರಮೇಶ ದಸ್ಮಾ, ಮಲ್ಲಿಕಾರ್ಜುನ ಸಿಂದಗಿ, ಶಾಂತಯ್ಯ ಬೀದಿಮನಿ, ರೇವಣಸಿದ್ದಪ್ಪ ಜೀವಣಗಿ, ತರುಣಶೇಖರ ಬಿರಾದಾರ, ಶರಣಯ್ಯ ಸ್ವಾಮಿ ಮಠಪತಿ ಇನ್ನೀತರರು ಉಪಸ್ಥಿತರಿದ್ದರು.