
ಕಲಬುರಗಿ; ವಿದ್ಯಾರ್ಥಿ ನಿಲಯಗಳ ಆಹಾರ ಟೆಂಡರ್‍ನಲ್ಲಿ ಅಕ್ರಮ, ಅಪ್ರಾಪ್ತ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮತ್ತು ಅಧಿಕಾರಿಗಳ ದೀರ್ಘಾವಧಿ ಒಂದೇ ಹುದ್ದೆ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. ವೇದಿಕೆ ಜಿಲ್ಲಾ ಅಧ್ಯಕ್ಷ ಸಂದೀಪ್ ಭರಣಿ, ರಾಜ್ಯ ಅಧ್ಯಕ್ಷ ಶಿವಲಿಂಗ ಹಳಿಮನಿ, ದೇವಿಂದ್ರ ದೇಸಾಯಿ ಕಲ್ಲೂರ್, ಅಂಬರೀಶ್ ರಾಜಾಪೂರ, ಸತೀಶ್ ಕಡೂನ್, ಅಜಯ್ ಟೆಂಗೆ, ಸಿದ್ದು ಸ್ವಾಮಿ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.





























