
ಕಲಬುರಗಿ,ಆ.1-ಮತ್ತಿಮಡು ಗ್ರಾಮದ ಲಲಿತ ಕಲಾ ಸೇವಾ ಸಂಸ್ಥೆ ವತಿಯಿಂದ ನಗರದ ಚೌದಾಪುರಿ ಹಿರೇಮಠದಲ್ಲಿ ಗಾನ ಚಂದನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಹಾರ್ಮೋನಿಯಂ ನುಡಿಸುವ ಮೂಲಕ ವೆಂಕಟೇಶ್ ಕುಲಕರ್ಣಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಮೇಲೆ ಶಿವಕುಮಾರ್ ಈರಪಾಣಿ, ಲಲಿತಾಬಾಯಿ ಬಸವರಾಜ್ ಕಣ್ಣಿ, ನೇತ್ರಾವತಿ ಉದಯ್ ಕುಮಾರ್ ಸ್ಥಾವರಮಠ, ಸರಸ್ವತಿ ಎಸ್ ಪಾಟೀಲ್, ಕಮಲಾಬಾಯಿ ಪಾಟಿಲ್, ಶಾರದಾಬಾಯಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಆಕಾಶವಾಣಿ ದೂರದರ್ಶನ ಕಲಾವಿದರಾದ ಗುರುಲಿಂಗಯ್ಯ ಗವಾಯಿಗಳು ಹಿತ್ತಲ ಶಿರೂರು, ಸೈದಪ್ಪ ಚೌಡಾಪುರ್, ಸಂಗಮೇಶ್ ನೀಲಾ, ವೀರೇಂದ್ರ ಬಂಟನಳ್ಳಿ, ಉದಯ್ ಕುಮಾರ್ ಮಠಪತಿ, ಶಿವಲಿಂಗಯ್ಯ ಗರೂರ್, ಆನಂದ ನಂದಿಕೋಲಮಠ, ಅನಿಲ್ ಮಠಪತಿ, ರೇವಣಸಿದ್ಧ ಹೂಗಾರ್ ದೇಸಾಯಿ ಕಲ್ಲೂರು, ಚೇತನ್ ಎಸ್ ಬೀದಿಮನಿ, ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ, ಮೌನೇಶ್ ಪಂಚಾಳ, ಶ್ರೀಶೈಲ ವಗ್ಗಾಲಿ, ವಿನೋದ್ ದಸ್ತಾಪೂರ, ಬಂಡಯ್ಯ ಸ್ವಾಮಿ ಸುಂಟನೂರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರೆಂದು ಲಲಿತ ಕಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಣ್ಣಾರಾವ ಶಳ್ಳಗಿ ಮತ್ತಿಮಡು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























