
ಬಾದಾಮಿ,ಸೆ.೨೩: ತಾಲೂಕಿನ ಬೇಲೂರ ಗ್ರಾಮದ ರಥ ಬೀದಿಯಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಅನ್ನದಾನೇಶ್ವರ ಮಹಾ ರಥೋತ್ಸವವು ಮಂಗಳವಾರ ಸಂಜೆ ಸಂಬ್ರಮ ಸಡಗರದಿಂದ ನಡೆಯಿತು.
ಸಂಜೆ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಅನ್ನದಾನೇಶ್ವರ ಮಹಾರಾಜ ಕೀ ಜೈ ಎಂದು ಉತ್ಸಾಹದಿಂದ ಸೇರಿದ ಭಕ್ತರು ರಥ ಎಳೆದು ಭಕ್ತಿ ಭಾವ ಮೆರೆದರು. ಅಜ್ಜನ ಆಶೀರ್ವಾದ ಒಂದ ಇದ್ದರೆ ಸಾಕು ಎಲ್ಲವೂ ಸರಳವಾಗಿ ನಡೆಯುತ್ತವೆ ಎಂಬುದು ಭಕ್ತರ ಅಪಾರವಾದ ನಂಬಿಕೆ ಅವರ ಮೇಲೆ ಇರುವ ಪ್ರೀತಿ. ಭಕ್ತಿ ಅಜಾರಾಮರವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಸಮೂಹ ರಥಕ್ಕೆ ಹಣ್ಣು ಉತ್ತತಿ ಎಸೆಗೆ ಕೈಮುಗಿದು ಭಕ್ತಿಯಿಂದ ನಮಿಸಿದರು.
ಪರಾಭವನಾಮ ಸಂತ್ಸವರ (ಬಸವ ಶೆಕೆ.೮೯೫) ಭದ್ರಪದ ಬೇಳಿಗ್ಗೆ ಕತೃ ಗದ್ದುಗೆಗೆ ಮಹಾರುದ್ದಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜರುಗಿತು, ರಥೋತ್ಸವದಲ್ಲಿ ಜಾಲಿಹಾಳ ಗ್ರಾಮದ ಭಕ್ತರಿಂದ ತೇರಿನ ಹಗ್ಗದ ಸೇವೆ, ಹೊಳೆಹಡಗಲಿ ಗ್ರಾಮದಿಂದ ಕಳಸ ಸೇವೆ ನಡೆಯಿತು, ಬೇಲೂರಿನ ಬಸವೇಶ್ವರ ಭಜನಾ ಸಂಘ, ಡೊಳ್ಳಿನ ಮೇಳ, ಕರಡಿ ಮಜಲು, ಶಿರಬಡಗಿ ಬಜನಾ ಸಂಘ, ಮಂಗಳೂರಿನ, ಜಾಲಿಹಾಳ ಗ್ರಾಮದ ಹಲಗಿ ಮೇಳ, ಹಿರೇಹಾಳ, ಬೊಮ್ಮಸಾಗರ, ಢಾಣಕಶಿರೂರ, ಬಜನಾ ಸಂಘಗಳು, ಜಾಂಜ ಮೇಳ, ಹಿರೇನಸಬಿ. ಚೊಳಚಗುಡ್ಡ, ನವಿಲುಹೊಳೆ, ಹಿರೇನಸಬಿ, ಚಿಕ್ಕನಸಬಿ, ಗೋನಾಳ, ಮಂಗಳೂರು, ನೈನಾಪೂರ, ಬೇಲೇರಿ, ಬಸರಕೋಡ, ಮಣ್ಣೇರಿ, ನೆಲ್ಲೂರು, ಮಾಡಲಗೇರಿ, ಕೊತಬಾಳ ಹೊನ್ನಿಗನೂರ, ಬಜನಾ ಸಂಘ. ಮುಂತಾದ ಗ್ರಾಮಗಳಿಂದ ಆಗಮಿಸಿದ ಭಕ್ತರು ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಸಂಚರಿಸಿ ಭಕ್ತರಿಂದ ಪೂಜೆಗೊಂಡು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದವು, ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಬಾಗಿಯಾಗಿ ಕಣ್ತುಂಬಿಕೊAಡರು.
ಬೇಲೂರ ಶ್ರೀಅನ್ನದಾನೇಶ್ವರ ಶಾಖಾ ಮಠದ ಶ್ರೀ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷರು ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು, ದರೂರ ವೀರಕ್ತಮಠ ಕೊಟ್ಟೂರು ಮಹಾಸ್ವಾಮಿಗಳು, ನಿಡಗುಂದಿಕೊಪ್ಪ ಅಭಿನವ ಚನ್ನಬಸವ ಮಹಾಸ್ವಾಮಿಗಳು ಗರಗನಾಗಲಾಪುರ ನಿರಂಜನ ಪ್ರಭು ಸ್ವಾಮಿಗಳು, ಸೋಮಸಮುದ್ರ ಸಿದ್ದಲಿಂಗ ಸ್ವಾಮಿಗಳು, ಬೂಗುಂಪ ಸಿದ್ದೇಶ್ವರ ಸ್ವಾಮಿಗಳು, ಶ್ರೀಧರಗಡ್ಡಿ ಕೊಟ್ಟೂರು ದೇಶಿಕರು, ಬನವಾಶಿ ಶಿವಲಿಂಗ ದೇಶಿಕರು, ಶಿವಯೋಗಮಂದಿರ ಶರಣಬಸವ ಶರಣರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರ ಸಮೂಹ ಇದ್ದರು. ಸೆ.೨೬ಶನಿವಾರ ಕಳಸಾರೋಹಣ ನಡೆ























