Home ಜಿಲ್ಲೆ ನೀಟ್ ನಲ್ಲಿ 150ನೇ ಱ್ಯಾಂಕ್ ಪಡೆದ ಎನ್. ಸಾಯಿ ಶ್ರಾವ್ಯಗೆ ಬಿಡಿಸಿಸಿಐನಿಂದ ಅಭಿನಂದನೆ

ನೀಟ್ ನಲ್ಲಿ 150ನೇ ಱ್ಯಾಂಕ್ ಪಡೆದ ಎನ್. ಸಾಯಿ ಶ್ರಾವ್ಯಗೆ ಬಿಡಿಸಿಸಿಐನಿಂದ ಅಭಿನಂದನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.01: ನೀಟ್ (UG)-2026 ಪರೀಕ್ಷೆಯಲ್ಲಿ 150ನೇ ರ್ಯಾಂಕ್ ಗಳಿಸಿರುವ ಬಳ್ಳಾರಿಯ ವಿದ್ಯಾರ್ಥಿನಿ ಎನ್. ಸಾಯಿ ಶ್ರಾವ್ಯ ಅವರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಶುಕ್ರವಾರ ಸನ್ಮಾನಿಸಿ ಅಭಿನಂದಿಸಿದೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ  ಕೆ. ಸಿ. ಸುರೇಶಬಾಬು ಅವರು, ಎನ್. ಸಾಯಿ ಶ್ರಾವ್ಯ ಅವರಿಗೆ ಅಭಿನಂದನೆ ಸಲ್ಲಿಸಿ, ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ, ಜನಸೇವೆಗೆ ಅರ್ಪಣೆಗೊಳ್ಳಬೇಕು ಎಂದು ಹಾರೈಸಿದರು.

ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಎನ್. ಸಾಯಿ ಶ್ರಾವ್ಯ ಅವರು, ಬಿಡಿಸಿಸಿಐನಲ್ಲಿ ಅಭಿನಂದನೆಗಳನ್ನು ಸ್ವೀಕರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹೆಮ್ಮೆ ಅನಿಸುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ  ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ, ಮಾಜಿ ಅಧ್ಯಕ್ಷರಾದ ಬಿ. ಮಹಾರುದ್ರ ಗೌಡ, ಸಿ. ಶ್ರೀನಿವಾಸರಾವ್, ಡಾ. ಡಿ. ಎಲ್. ರಮೇಶ್ ಗೋಪಾಲ್, ವಿವಿಧ ಕಮಿಟಿಗಳ ಅಧ್ಯಕ್ಷರು, ವಿಶೇಷ ಆಹ್ವಾನಿತರು ಹಾಗೂ ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದು ಎನ್. ಸಾಯಿ ಶ್ರಾವ್ಯ ಅವರನ್ನು ಅಭಿನಂದಿಸಿದರು.