
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.05: ಜಿಲ್ಲಾ ಕುರುಬರ ಸಂಘಕ್ಕೆ ರಲ್ಲಿ ನಡೆದ 31 ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದಅಭ್ಯರ್ಥಿಗಳಿಂದ ಪಡೆದ ಠೇವಣಿ ಹಣವನ್ನು ಸಂಘಕ್ಕೆ ಚುನಾವಣಾಧಿಕಾರಿಯಾಗಿದ್ದ.ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಯ ಸಹಕಾರಿ ಅಭಿವೃದ್ಧಿ ಅಧಿಕಾರಿ, ಜೆ.ಎಂ.ನಾಗರಾಜ್ ಅವರು ಎರೆಡು ವರ್ಷ ಕಳೆದರೂ ಹಿಂದಿರುಗಿಸಿಲ್ಲ ಎಂದು ಸಂಘದ ಕಾರ್ಯದರ್ಶಿ ಅಲ್ಲಿಪುರ ಕೆ.ಮೋಹನ್ ಅವರು ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಗೆ. ಸಂಬಂಧಿಸದ ಇಲಾಖೆಯ ಸಚಿವರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದಾಗ ನಾಗರಾಜ್ ಅವರು ಲಿಖಿತ ಹೇಳಿಕೆ ಹಾಗೂ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿತ್ತು ಕಳೆದ ಜನವರಿಯಲ್ಲಿ ಆಗ ಅವರು ಅರ್ಹರಿರುವ ಅಭ್ಯರ್ಥಿಗಳಿಗೆ ಠೇವಣಿಯನ್ನು ವಾಪಸು ನೀಡಿ ಉಳಿದಂತೆ ಎಲ್ಲಾ ಚುನಾವಣಾ ಖರ್ಚು ವೆಚ್ಚಗಳನ್ನು ಸಂಘದ ಆಡಳಿತಾಧಿಕಾರಿಗಳಿಗೆ ಒಪ್ಪಿಸಿ ಇರುತ್ತೇನೆ ಎಂದು ತಿಳಿಸಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಅರ್ಹರಿರುವ ಅಭ್ಯರ್ಥಿಗಳಿಗೆ ಠೇವಣಿಯನ್ನು ವಾಪಸ್ಸು ನೀಡಿದ ಬಗ್ಗೆ ಯಾವುದೇ ದಾಖಲಾತಿ ಗಳನ್ನು ಸಲ್ಲಿಸಿರಲಿಲ್ಲ. ಇದಲ್ಲದೆ ಆಡಳಿತಾಧಿಕಾರಿಗಳಿಗೆ ಚುನಾವಣಾ ಠೇವಣಿ ವಾಪಸ್ ನೀಡಿರುವ ಕುರಿತಾಗಿ ಯಾವುದೇ ದಾಖಲಾತಿಗಳನ್ನು ಸಲ್ಲಿಸಿರಲಿಲ್ಕ. ಇದನ್ನು ಹಿಂದಿನ ಆಡಳಿತಾಧಿಕಾರಿಗಳು ಸಂಘಕ್ಕೆ ಸಂಬಂಧಿಸಿದ ಎಲ್ಲಾ ಖರ್ಚುವೆಚ್ಚಗಳ ಪ್ರಭಾರವನ್ನು ಸಂಘದ ಆಡಳಿತ ಮಂಡಳಿಗೆ ವಹಿಸಿದ ಸಂದರ್ಭದಲ್ಲಿ ಎಲ್ಲಾ ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ಸಹ ಇವರು ಸಲ್ಲಿಸಿದ ಕಂಡು ಬಂದಿದಿಲ್ಲ, ಆಲ್ಲದೆ ನೇರವಾಗಿ ಸಂಘದ ಖಾತೆಗೆ ಚುನಾವಣೆ ಠೇವಣಿ ಜಮೆ ಆಗಿರುವುದರ ಬಗ್ಗೆ ಬ್ಯಾಂಕಿನ ದಾಖಲಾತಿಗಳನ್ನು ಪರಿಶೀಲಿಸಿದಾ ಸಹ ಗ ಯಾವುದೇ ಮಾಹಿತಿ ಕಂಡು ಬಂದಿದಿಲ್ಲ.
ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಚುನಾವಣಾ ಠೇವಣಿಯನ್ನು ಸಂಘದ ಖಾತೆಗೆ ಹಾಕಬೇಕಾದ ಗುರುತರ ಜವಾಬ್ದಾರಿ ರಿಟರ್ನಿಂಗ್ ಅಧಿಕಾರಿಗಳನ್ನು ಆಗಿರುತ್ತದೆ. ಇಲ್ಲವೇ ಚುನಾವಣಾ ಠೇವಣಿಯನ್ನು ನಗದಾಗಿ ಸ್ವೀಕರಿಸಿದಲ್ಲಿ. ಅದನ್ನು ನಿಯಮಾನುಸಾರ ಅರ್ಹ ಅಭ್ಯರ್ಥಿಗಳಿಗೆ ಕೊಟ್ಟಿದ್ದೆ ಆದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ದೂರು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಜೆ.ಯಂ ನಾಗರಾಜ ಅವರು ಹಾಜರು ಪಡಿಸಿಲ್ಲ, ಹೀಗಾಗಿ ಅವರ ಹೇಳಿಕೆಯನ್ನು ಪುರಾವೆಗಳ ಮೂಲಕ ಸಮರ್ಥಿಸುವ ದಾಖಲಾತಿ ಲಭ್ಯವಿಲ್ಲ.
ಸಂಘದ ಖಾತೆಗಾಗಲಿ ಅಥವಾ ಆಡಳಿತಾಧಿಕಾರಿಗಳು ಸಂಘಕ್ಕೆ ಒಪ್ಪಿಸಿದ ದಾಖಲೆಯಲೆ ಆಗಲಿ ಸಂಘದ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಠೇವಣಿಯ ಕುರಿತಾಗಿ ಮಾಹಿತಿ ಇಲ್ಲದಿರುವುದರಿಂದ ಅದು ಸಂಘದ 2023 -24 ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿಯೂ ಕಂಡುಬಂದಿಲ್ಲ,
ನಾಗರಾಜ ಅವರು ಚುನಾವಣಾ ಠೇವಣಿಯನ್ನು ಪಾವತಿಸಿದಲ್ಲಿ ಅದರ ಸ್ವೀಕೃತಿಯನ್ನು 15 ದಿನಗಳೊಳಗಾಗಿ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಅದೇ ರೀತಿ ಸಂಘಕ್ಕೂ ಸಹ ತಲುಪಿಸಲು ತಿಳಿಸಿದೆ. ಸಲ್ಲಿಸದೇ ಇದ್ದಲ್ಲಿ ಈ ಪತ್ರ ತಲುಪಿದ 15 ದಿನಗಳೊಳಗಾಗಿ ಪಾವತಿಸಲು ಸೂಚಿಸಿದೆ ತಪ್ಪಿದಲ್ಲಿ ನಿಮ್ಮ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಯವರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ವೀರಭದ್ರಯ್ಯ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಸಂಘದ ಚುನಾವಣೆಯ ವೆಚ್ಚಕ್ಕೆಂದು ಸಂಘದ ಖಾತೆಯಿಂದ 7 ಲಕ್ಷ ರೂ ಡ್ರಾ ಮಾಡಿದ್ದಾರೆ. ಆದರೂ ಚುನಾವಣೆಯ ಠೇವಣೆ ಹಣ 80 ಸಾವಿರ ರೂಗಳನ್ನು ಚುನಾವಣಾಧಿಕಾರಿ ಜೆ.ಎಂ.ನಾಗರಾಜ್ ಅವರು ಹಿಂದಿರುಗಿ ನೀಡಿಲ್ಲ.
ಕೆ.ಮೋಹನ್
ಪ್ರಧಸನ ಕಾರ್ಯದರ್ಶಿ.
ಜಿಲ್ಲಾ ಕುರುಬರ ಸಂಘ, ಬಳ್ಳಾರಿ.































