
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.01 : ನಗರದ ಸಾಂಸ್ಕೃತಿಕ ಸಮುಚ್ಚಯದ ಕನ್ನಡ ಭವನದಲ್ಲಿ ನಾಳೆ ಆ.2 ರಂದು ಕವಿ ಚಾಂದ್ ಬಾಷರ ‘ಮಗು ನೀನಾಗುವೆ ನಾ’ ಕವನ ಸಂಕಲನ ಬಿಡುಗಡೆಯಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಸ್ಟ್ ಪ್ರಕಾಶನ ತೆಕ್ಕಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಮಾಡಲಿದ್ದು. ಅಧ್ಯಕ್ಷತೆಯನ್ನು ಹಿರಿಯ ವರದಿಗಾರ ಹರಿಶಂಕರ್ ಆರ್, ವಹಿಸಲಿದ್ದು, ಕೃತಿ ಬಿಡುಗಡೆಯನ್ನು ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಎನ್. ವೀರಭದ್ರಗೌಡ ಮಾಡಲಿದ್ದಾರೆ.
ಕೃತಿ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿರುಗುಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು, ಬಳ್ಳಾರಿ ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಪಾಲಿಕೆ ಸದಸ್ಯ ಅರ್ಷದ್ ಅಲಿ ಭಾಗವಹಿಸಲಿದ್ದಾರೆ.
ನೃತ್ಯ ಕಲಾವಿದ ಎಸ್. ಕೆ. ಆರ್ ಜೀಲಾನಿ ಬಾಷ, ಲೇಖಕರಾದ ಡಾ. ಶಿವಲಿಂಗಪ್ಪ ಕೆ ಹಂದಿಹಾಳ್, ಡಾ.ವೀರೇಂದ್ರ ರಾವಿಹಾಳ್, ಚಿತ್ರ ಕಲಾವಿದ ಕಲಾವಿದ
ಮಹಮದ್ ರಫಿ, ಇವರಿಗೆ ಗೌರವ ಸನ್ಮಾನ ಆಯೋಜಿಸಲಾಗಿದೆ.





























