Home ಜಿಲ್ಲೆ ಬೆಂಗಳೂರು ಅಂಧ ಮಕ್ಕಳ ಶಿಕ್ಷಣಕ್ಕೆ ಎಐ ತಂತ್ರಜ್ಞಾನದ ಬಲ: ಎಜುಆಕ್ಸೆಸ್ 2026’ ಮೂಲಕ ಸಮಾನ ಕಲಿಕೆಗೆ ಒತ್ತು

ಅಂಧ ಮಕ್ಕಳ ಶಿಕ್ಷಣಕ್ಕೆ ಎಐ ತಂತ್ರಜ್ಞಾನದ ಬಲ: ಎಜುಆಕ್ಸೆಸ್ 2026’ ಮೂಲಕ ಸಮಾನ ಕಲಿಕೆಗೆ ಒತ್ತು

ಬೆಂಗಳೂರು.ಅ.24: ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವುದು ಹಾಗೂ ವಿಶೇಷ ಚೇತನರು ಸೇರಿದಂತೆ ಪ್ರತಿಯೊಬ್ಬರಿಗೂ ಸಮಾನ ಕಲಿಕಾ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಅಶ್ವಿನಿ ಅಂಗಡಿ ಟ್ರಸ್ಟ್ ವತಿಯಿಂದ ಎಜುಆಕ್ಸೆಸ್ 2026′ ಕಾರ್ಯಕ್ರಮವನ್ನು ಶನಿವಾರ ವಿಜಯನಗರದ ಕಾಸಿಯಾ ಉದ್ಯೋಗ ಭವನದಲ್ಲಿ ಆಯೋಜಿಸಲಾಯಿತು. `ಶಿಕ್ಷಣದ ಮೂಲಕ ಸಬಲೀಕರಣ, ಅವಕಾಶಗಳ ವಿಸ್ತರಣೆ’ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.


ನವದೆಹಲಿಯ ವಿಕಲಚೇತನರ ಮುಖ್ಯ ಆಯುಕ್ತರ ಕಚೇರಿಯ ಎಸ್. ಗೋವಿಂದರಾಜ್, ಕೆ.ಕೆ. ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್‍ನ ಆಡಳಿತ ಮಂಡಳಿ ಸದಸ್ಯ ಡಾ. ಮಸೂದ್ ಅಲಿ ಖಾನ್ ಹಾಗೂ ಕರ್ನಾಟಕ ರಾಜ್ಯ ಖನಿಜ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ವಿಶ್ವನಾಥ್ ಪಿ. ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಎಸ್.ಗೋವಿಂದರಾಜ್ ರವರು ಮಾತನಾಡಿ ಅಂಧ ಮಕ್ಕಳು, ಶಿಕ್ಷಕರು, ಪೆÇೀಷಕರ ಅನುಕೂಲಕ್ಕೆ ಪ್ರದರ್ಶನ ಮೇಳವಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಜೀವನದಲ್ಲಿ ಬದಲಾವಣೆ ತರಲು ಸಹಕಾರಿಯಾಗಿದೆ.ಅಶ್ವಿನಿ ಅಂಗಡಿರವರು ಮಾತನಾಡಿ ಅಂಧರು, ದಿವ್ಯಾಂಗರಿಗೆ ಆಧುನಿಕತೆ ಜೊತೆಯಲ್ಲಿ ಸಾಗಲು, ಬುದ್ಧಿಕೌಶಲ್ಯ ಹೆಚ್ಚಿಸಲು ಕಾರ್ಯಕ್ರಮ. ಕಣ್ಣು ಇಲ್ಲದಿದ್ದರು ಪುಸ್ತಕದ ಜ್ಞಾನ ಬೆಳಸಿಕೊಳ್ಳಿ ಇಂದು ತಂತ್ರಜ್ಞಾನ ಬೆಳದಿದೆ ಎಂದು ಹೇಳಿದರು.
ಅಶ್ವಿನಿ ಅಂಗಡಿ ಟ್ರಸ್ಟ್‍ನ ಸಂಸ್ಥಾಪಕ ಟ್ರಸ್ಟಿ ಅಶ್ವಿನಿ ಅಂಗಡಿ ಹಾಗೂ ಅಧ್ಯಕ್ಷ ಟ್ರಸ್ಟಿ ಡಾ. ಎಸ್. ಪ್ರದೀಪ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು, ವಿಶೇಷ ಚೇತನ ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಕಲಿಕೆಯ ಹೊಸ ಸಾಧ್ಯತೆಗಳನ್ನು ಪರಿಚಯಿಸುವುದರ ಜೊತೆಗೆ, ಎಲ್ಲರನ್ನೂ ಒಳಗೊಂಡ ಮತ್ತು ಸಮಾನ ಅವಕಾಶಗಳಿರುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಮಹತ್ವದ ಪ್ರಯತ್ನವಾಗಿ ಮೂಡಿಬಂದಿತು.