
ಕಲಬುರಗಿ,ಅ.24-ನಗರದ ಪಾಯನ್‍ಗಲ್ಲ ತಲಾಬ್ ಜಾಗದಲ್ಲಿ ಕಾರಿನಲ್ಲಿ ಕುಳಿತು ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ರೋಜಾ ಪೊಲೀಸ್ ಠಾಣೆ ಪಿಎಸ್‍ಐ ಸುಲೋಚನಾ, ಸಿಬ್ಬಂದಿಗಳಾದ ಅಜ್ಮೀರ್ ಅಲಿ, ಯಲ್ಲಪ್ಪ, ಮಹಿಳಾ ಪೇದೆ ಮಹಾಂತಮ್ಮ, ಹಣಮಂತ ಅವರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಸೋನಿಯಾ ಗಾಂಧಿ ಕಾಲೋನಿಯ ಮೊಹಮ್ಮದ್ ಸರ್ಫರಾಜ್, ಮೆಹಬೂಬ್ ನಗರದ ಎಂ.ಡಿ.ಶೋಹೆಬ್ ಮತ್ತು ವಸೀಮ್ ಎಂಬುವರನ್ನು ಬಂಧಿಸಿ 13 ಸಾವಿರ ರೂ.ಮೌಲ್ಯದ 90 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















