Home ಜಿಲ್ಲೆ ಕಲಬುರಗಿ ಪ್ರತ್ಯೇಕ ಮನೆ ಕಳ್ಳತನ: 28 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಪ್ರತ್ಯೇಕ ಮನೆ ಕಳ್ಳತನ: 28 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಅ.24-ಅಶೋಕ ನಗರ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣಗಳು ನಡೆದಿದ್ದು, ಮನೆಗಳ ಬೀಗ ಮುರಿದು ಕಳ್ಳರು 28 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೈಕೋರ್ಟ್ ಎದರುಗಡೆಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಸಂದೀಪ್ ಮೈನಾಳ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 15 ಲಕ್ಷ ರೂ.ಮೌಲ್ಯದ 110 ಗ್ರಾಂ.ಬಂಗಾರದ ಆಭರಣ, 1 ಕೆಜಿ 330 ಗ್ರಾಂ.ಬೆಳ್ಳಿ ಸಾಮಾನುಗಳು ಮತ್ತು 2 ಲಕ್ಷ ರೂ.ನಗದು ಸೇರಿ 20 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಓಝಾ ಲೇಔಟ್‍ನಲ್ಲಿ ಬಸವಂತಪ್ಪ ಇಮಡಿ ಎಂಬುವವರ ಮನೆ ಬೀಗ ಮುರಿದು ಕಳ್ಳರು 8.40 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಅಶೋಕ ನಗರ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.