Home ಜಿಲ್ಲೆ ಬೆಂಗಳೂರು ಫೋನ್‌ಪೇ ಮೂಲಕ ವಾಹನ ವಿಮೆ: ಶೇ.೯೦ರವರೆಗೆ ಉಳಿತಾಯ

ಫೋನ್‌ಪೇ ಮೂಲಕ ವಾಹನ ವಿಮೆ: ಶೇ.೯೦ರವರೆಗೆ ಉಳಿತಾಯ

ಬೆಂಗಳೂರು.ಅ೨೪: ಹಬ್ಬದ ಸಂದರ್ಭದಲ್ಲಿ ಹೊಸ ಕಾರು ಅಥವಾ ಬೈಕ್ ಖರೀದಿಸುವ ಗ್ರಾಹಕರಿಗೆ ಸುಲಭ, ಪಾರದರ್ಶಕ ಮತ್ತು ಕೈಗೆಟುಕುವ ವಿಮಾ ಆಯ್ಕೆಗಳನ್ನು ಒದಗಿಸಲು ಫೋನ್‌ಪೇ ಅವಕಾಶ ಕಲ್ಪಿಸಿದೆ. ಆಪ್ ಮೂಲಕ ವಿವಿಧ ವಿಮಾ ಕಂಪನಿಗಳ ಪಾಲಿಸಿಗಳನ್ನು ಹೋಲಿಕೆ ಮಾಡಿ, ತಮ್ಮ ಅಗತ್ಯ ಮತ್ತು ಬಜೆಟ್‌ಗೆ ತಕ್ಕ ವಿಮೆ ಆಯ್ಕೆ ಮಾಡಿಕೊಳ್ಳಬಹುದು.


ಫೋನ್‌ಪೇನಲ್ಲಿ ಹೊಸ ಬೈಕ್ ವಿಮೆ ೨,೭೦೦ರಿಂದ ಹಾಗೂ ಕಾರು ವಿಮೆ ೭,೨೦೦ರಿಂದ ಆರಂಭವಾಗುತ್ತದೆ. ಗ್ರಾಹಕರು ಕಾರು ವಿಮೆಯಲ್ಲಿ ೪೦,೦೦೦ರವರೆಗೆ ಮತ್ತು ಬೈಕ್ ವಿಮೆಯಲ್ಲಿ ೪,೦೦೦ರವರೆಗೆ ಉಳಿತಾಯ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಗರಿಷ್ಠ ಉಳಿತಾಯ ಶೇ.೯೦ರವರೆಗೆ ಇರಬಹುದು.


ಝೀರೋ ಡಿಪ್ರಿಸಿಯೇಶನ್, ಎಂಜಿನ್ ಪ್ರೊಟೆಕ್ಟ್ ಮತ್ತು ಕನ್ಸ್ಯೂಮಬಲ್ಸ್ ಕವರ್‌ನಂತಹ ಹೆಚ್ಚುವರಿ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಮೆಯ ಮೊತ್ತವನ್ನು ನಿರ್ಧರಿಸುವ ಐಡಿವಿ (Iಆಗಿ) ಬದಲಾಯಿಸುವ ಅವಕಾಶವೂ ಇದೆ. ಬಹು-ವರ್ಷದ ವಿಮಾ ಯೋಜನೆಗಳ ಮೂಲಕ ನವೀಕರಣದ ಜಂಜಾಟವನ್ನೂ ಕಡಿಮೆ ಮಾಡಬಹುದು.


ಆನ್‌ಲೈನ್‌ನಲ್ಲಿ ವಿಮೆ ಖರೀದಿಸುವುದರಿಂದ ವಾಹನ ನೋಂದಣಿಗೆ ತೊಂದರೆಯಾಗುವುದಿಲ್ಲ. ಪಾಲಿಸಿಯ ವಿವರಗಳನ್ನು ಪೂರ್ಣಗೊಳಿಸಿದ ಬಳಿಕ ಡಿಜಿಟಲ್ ದಾಖಲೆ ಪಡೆಯಬಹುದು. ಪಾಲುದಾರ ವಿಮಾ ಕಂಪನಿಗಳ ಮೂಲಕ ನಗದುರಹಿತ ದುರಸ್ತಿ ಸೌಲಭ್ಯವೂ ಲಭ್ಯವಿದೆ.