
ಕಲಬುರಗಿ: ನಾಡೋಜ ಡಾ.ಜೆ.ಎಸ್.ಖಂಡೇರಾವ ಪ್ರತಿಷ್ಠಾನದ ವತಿಯಿಂದ ನಗರದ ಎಂಆರ್ಎಂಸಿಯ ಸ್ಯಾಕ್ ಬಿಲ್ಡಿಂಗ್ನಲ್ಲಿ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ನಾಡೋಜ ಡಾ.ಜೆ.ಎಸ್.ಖಂಡೇರಾವ ಅವರ “ಅಮೂರ್ತ ಧ್ಯಾನ” ಗ್ರಂಥವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಬಿಡುಗಡೆ ಮಾಡಿದರು. ಮೌನ ತಪಸ್ವಿ ಜಡೇ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಭಾಲ್ಕಿ ಹಿರೇವiಠ ಸಂಸ್ಥಾನದ ಕಿರಿಯ ಸ್ವಾಮೀಜಿ, ಹಿರಿಯ ಚಿತ್ರಕಲಾವಿದ ಡಾ.ಎಂ.ಎಸ್.ಮೂರ್ತಿ, ಡಾ.ಸಿ.ಚಂದ್ರಶೇಖರ್, ನಾಡೋಜ ಜೆ.ಎಸ್.ಖಂಡೇರಾವ, ಪ್ರೊ.ವಿಕ್ರಮ ವಿಸಾಜಿ, ಬಸವರಾಜ ಪಾಟೀಲ ಸೇಡಂ, ಡಾ.ಪಿ.ಎಸ್.ಶಂಕರ್, ವೆಂಕಟಾ ಚಲಪತಿ ಸೇರಿದಂತೆ ಮತ್ತಿತರ ಗಣ್ಯರು ಇದ್ದರು.






















