
ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಭವನದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಚನ್ನಮ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರಾದ ಬಸವರಾಜ ಗೋಲಪ್ಪನವರ, ಬಸವರಾಜ ನವಲಗುಂದ, ಮಡಿವಾಳಪ್ಪ ಶಿರಿಯಣ್ಣವರ, ನಿಂಗಣ್ಣ ಕರಿಕಟ್ಟಿ, ನಾಗರಾಜ ಪಟ್ಟಣಶೆಟ್ಟಿ, ಬಸವರಾಜ ನವಲಗುಂದ, ಡಿ.ಎಂ.ನಿಡವಣಿ, ಕೆ.ಬಿ.ಮದ್ನೂರ, ಎನ್.ಎನ್.ಮುಶಪ್ಪನವರ, ಪ್ರಕಾಶ ಬಾವಿಕಟ್ಟಿ, ಗಿರೀಶ ಕಲ್ಲಾಪೂರ ಹಾಗೂ ಸಮಸ್ತ ಚನ್ನಮ್ಮನ ಅಭಿಮಾನಿಗಳು ಇದ್ದರು.























