
ಕೆಆರ್ ಪುರ, ಅ.೨೩- ಶಿಕ್ಷಕರ ಚುನಾವಣೆ ಕೆಆರ್ ಪುರದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದು,ಅಭ್ಯರ್ಥಿಗಳ ಪರವಾಗಿ ಮುಖಂಡರು ಬಿರುಸಿನ ಚಟುವಟಿಕೆ ನಡೆಸಿದ್ದಾರೆ.
ಎನ್ ಡಿಎ ಅಭ್ಯರ್ಥಿಯಾಗಿ ರಂಗನಾಥ್ ರವರು ಸ್ಪರ್ಧಿಸಿದ್ದು, ಅವರ ಇಡೀ ಕೆಆರ್ ಪುರ ಬಿಜೆಪಿ ನಾಯಕರು ಮುಗಿಬಿದ್ದಿದ್ದರು.
ಮಂಡಲ ಅಧ್ಯಕ್ಷ ಮುನೇಗೌಡ ಮಾತನಾಡಿ, ಕಳೆದ ಬಾರಿ ಕೆಲವೇ ಅಂತರದಲ್ಲಿ ರಂಗನಾಥ್ ರವರು ಸೋತಿದ್ದರು. ಈ ಬಾರಿ ರಂಗನಾಥ್ ರವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಕಳೆದ ಬಾರಿ ಗೆದ್ದ ಅಭ್ಯರ್ಥಿ ಶಿಕ್ಷಕರ ಪರ ಕೆಲಸ ಮಾಡುವಲ್ಲಿ ವಿಫಲವಾಗಿದ್ದಾರೆ. ರಂಗನಾಥ್ ರವರು ವೃತ್ತಿಯಲ್ಲಿ ವಕೀಲರಾಗಿದ್ದು ಶಿಕ್ಷಕರ ಪರ ವಿಶೇಷ ಕಾಳಜಿ ವಹಿಸಿರುವವರು ಎಂದು ಹೇಳಿದರು.
ರಂಗನಾಥ್ ರವರು ಗೆಲ್ಲುವ ಮೂಲಕ ಶಿಕ್ಷಕರ ಪರ ನಿರಂತರ ಕೆಲಸ ಮಾಡುವಲ್ಲಿ ಪಣ ತೊಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀರಾಮುಲು, ವಾರ್ಡ್ ಅಧ್ಯಕ್ಷರಾದ ಶಿವಪ್ಪ, ಡಿ.ಹೆಚ್.ರಮೇಶ್, ಮುಖಂಡರಾದ ಇಂದ್ರಮ್ಮ, ರಾಜೇಶ್ವರಿ , ಶೈಲಾ, ಕೆ.ಪಿ.ಕೃಷ್ಣ, ರಾಜು, ಎಲ್ಐಸಿ ವೆಂಕಟೇಶ್ ಮತ್ತಿತರರಿದ್ದರು



















