Home ಜಿಲ್ಲೆ ವಲಯ ಮಟ್ಟದ ಕ್ರಿಡಾಕೂಟಕ್ಕೆ ಚಾಲನೆ

ವಲಯ ಮಟ್ಟದ ಕ್ರಿಡಾಕೂಟಕ್ಕೆ ಚಾಲನೆ

ಮುನವಳ್ಳಿ,ಆ.೨೭: ಕಟಕೋಳದ ಗ್ರಾಮದ ಎಸ್.ಜಿ.ಕೆ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜ್ಞಾನಾಮೃತ ಇಂಟರ್‌ನ್ಯಾಷನಲ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ತೋರಣಗಟ್ಟಿ ಇವರ ಆಶ್ರಯದಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ ಡಾ.ಪಿ.ಕೆ ರಾಠೋಡ ಮಂಗಳವಾರ ಚಾಲನೆ ನೀಡಿ ಮಾತನಾಡಿ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದ್ದು ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಬೇಕೆಂದರು.


ಕೆ.ವೈ.ಹುಣಸಿಕಟ್ಟಿ ಮಾತನಾಡಿ ಕ್ರೀಡೆಗಳು ವಿದ್ಯಾರ್ಥಿಗಳ ದ್ಯಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಶಿಸ್ತು ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಪೂರ್ತಿಯನ್ನು ಬೆಳಸಿಕೊಳ್ಳಬೇಕು ಎಂದರು.


ಆರ್.ಜಿ.ಸಿAಗಾರಗೊಪ್ಪ ಮಾತನಾಡಿ ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಸ್ಪರ್ಧಿಸಬೇಕು ಜ್ಞಾನಮೃತ ಶಾಲೆಯವರು ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ ಆದ್ದರಿಂದ ಎಲ್ಲಾ ಮಕ್ಕಳು ಉತ್ತಮ ರೀತಿಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಬೇಕು ಎಂದರು.
ತಮ್ಮೇಶ ಐನಾಪೂರ, ಸೋಮನಗೌಡ ಮಲಗೌಡ್ರ, ಎಸ್.ವಿ.ದಿವಟಗಿ, ಅಮಿತ್ ದೇಸಾಯಿ, ಎಸ್.ಟಿ.ಹುಣಸಿಕಟ್ಟಿ, ಬಸವರಾಜ ಐನಾಪೂರ, ಮಹೇವ ಚಿನ್ನಾಕಟ್ಟಿ, ಸುರೇಶ ಬಸಿಡೋಣಿ, ಎಮ್.ಎಸ್.ಹಗೆದಾಳ, ಲಕ್ಷö್ಮಣ ಕಾಮಣ್ಣವರ, ಆರ್,ಐ,ಸಿಂಗಾರಗೋಪ್ಪ, ಎನ್.ಜಿ.ಗಂಗಾಳದ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಉಸಪ್ಥಿತರಿದ್ದರು.