
ಕಲಬುರಗಿ,ಸೆ.26: ಇಂದು ಬೆಳಿಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ಅವರು ಕಲಬುರಗಿ ತಾಲೂಕಿನ ಅವರಾದ (ಬಿ) ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಕಮಲಾಪುರ ತಾಲೂಕಿನ ಮಹಾಗಾವ್ ಕ್ರಾಸ್ ಸರ್ಕಾರಿ ಪ್ರೌಢಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸಗಳ ಗುಣಮಟ್ಟ ಪರಿಶೀಲನೆ ಮಾಡಿ, ಸರಬರಾಜು ವಿತರಣೆಯ ಬಗ್ಗೆ ಮುಖ್ಯ ಗುರುಗಳಿಂದ ಮಾಹಿತಿಯನ್ನು ಪಡೆದರು.
ನಂತರ ವಿದ್ಯಾರ್ಥಿಗಳೊಂದಿಗೆ ಶೂ ಮತ್ತು ಸಾಕ್ಸ್‍ಗಳ ಅಳತೆಯ ವ್ಯತ್ಯಾಸ, ಗುಣಮಟ್ಟ ಬಗ್ಗೆ ಸಂವಾದ ನಡೆಸಿದರು. ಇದೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಸ್‍ಡಿಎಂಸಿ ಸದಸ್ಯರ ಹಾಗೂ ಸಹ ಶಿಕ್ಷಕರೊಂದಿಗೂ ಮಾತನಾಡಿದರು.
ಭೇಟಿ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಂಕರಮ್ಮಾ ಡವಳಗಿ ಹಾಗೂ ಉತ್ತರ ವಲಯದ ಶೂ ಸಾಕ್ಸ್ ನೋಡಲ್ ಅಧಿಕಾರಿ ಸಿದ್ದಲಿಂಗ ರಾಮಗೊಂಡ ಅವರಿಗೆ, ಅಳತೆ ವ್ಯತ್ಯಾಸ ಕುರಿತು ತಾಲೂಕು ಹಂತದಲ್ಲಿಯೆ ತುರ್ತಾಗಿ ಆಂತರಿಕ ಬದಲಾವಣೆ ಕುರಿತು ಕ್ರಮ ವಹಿಸಲು ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.























