
ಜಮಖಂಡಿ: ತಾಲ್ಲೂಕಿನ ಹುನ್ನೂರ ಗ್ರಾಮದ ಬಸ್ ನಿಲ್ದಾಣದ ಸಮೀಪದ ಹೂವಿನ ಸಿದ್ದ ಸರೋವರ ಕೆರೆಯಲ್ಲಿ ಮಹಿಳೆಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಆಸಂಗಿ ಗ್ರಾಮದ ದೀಪಾ ಮಲ್ಲಿಕಾರ್ಜುನ ಅಂಬಿ (27) ಎಂದು ಗುರುತಿಸಲಾಗಿದೆ. ಅವರು ಸಿದ್ದಾಪುರ ಗ್ರಾಮದ ತಮ್ಮ ಪತಿಯ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಮಹಿಳೆ ಕೆರೆಗೆ ಯಾವ ಪರಿಸ್ಥಿತಿಯಲ್ಲಿ ಬಿದ್ದರು ಹಾಗೂ ಸಾವಿಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಕೆರೆಯ ದಂಡೆಯ ಮೆಟ್ಟಿಲುಗಳ ಬಳಿ ಅವರು ಧರಿಸಿದ್ದ ಚಪ್ಪಲಿಗಳು ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದುಬಂದ ಬಳಿಕ ಗ್ರಾಮೀಣ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ಸಾವಿನ ನಿಖರ ಕಾರಣ ಪೆÇಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.
























