Home ಜಿಲ್ಲೆ ಒಣಗುತ್ತಿರುವ ಬೆಳೆಗಳು: ಬರಪೀಡಿತ ಘೋಷಣೆಗೆ ಆಗ್ರಹ

ಒಣಗುತ್ತಿರುವ ಬೆಳೆಗಳು: ಬರಪೀಡಿತ ಘೋಷಣೆಗೆ ಆಗ್ರಹ


ಲಕ್ಷೆ÷್ಮÃಶ್ವರ,ಸೆ.೨: ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಒಣಗುತ್ತಿದ್ದು ಸರಕಾರಕ್ಕೆ ರೈತರ ಒಣಗುತ್ತಿರುವ ಬೆಳೆಗಳು ಕಾಣದಿರುವುದು ರೈತರ ಬೇಗುದಿಗೆ ಕಾರಣವಾಗಿದೆ.


ಬಿತ್ತಿದ ಬೆಳೆಗಳು ತೀವ್ರ ಮಳೆಯ ಕೊರತೆ ಮತ್ತು ತೇವಾಂಶದ ಕೊರತೆಯಿಂದಾಗಿ ಬೆಳವಣಿಗೆ ಕುಂಠಿತಗೊAಡು ಅಲ್ಲಿಯೇ ಬಿಸಿಲಿನ ತಾಪಮಾನಕ್ಕೆ ಒಣಗುತ್ತಿರುವುದು ಕಂಡು ರೈತ ಕಣ್ಣೀರು ಸುರಿಸುತ್ತಿದ್ದಾನೆ.
ಇಷ್ಟೆಲ್ಲ ಕಷ್ಟ ನಷ್ಟಗಳ ಮಧ್ಯೆಯೂ ಬರಪೀಡಿದ ಪ್ರದೇಶ ಎಂದು ಸಾರಿದರೆ ಸರ್ಕಾರದಿಂದ ಬೆಳೆ ಹಾನಿ ಬೆಳೆ ವಿಮೆ ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ರೈತರಿಗೆ ಸರ್ಕಾರ ಪ್ರಕಟಿಸಿರುವ ಬರಪೀಡಿತ ತಾಲೂಕುಗಳಲ್ಲಿ ಲಕ್ಷೆ÷್ಮÃಶ್ವರ ಶಿರಹಟ್ಟಿ ಮತ್ತು ಮುಂಡರಗಿಯನ್ನು ಕೈ ಬಿಟ್ಟಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.


ತಾಲೂಕಿನಲ್ಲಿ ಸುಮಾರು ೨೨ ಸಾವಿರ ಹೆಕ್ಟರ್ ಮೆಕ್ಕೆಜೋಳ ೬,೦೦೦ ಹೆಕ್ಟರ್ ಹೆಸರು ೩೦೦೦ ಹೆಕ್ಟರ್ ಶೇಂಗಾ ಸುಮಾರು ೨೦೦೦ ಹೆಕ್ಟರ್ ಹತ್ತಿ ಬಿತ್ತನೆಯಾಗಿದ್ದು ಈಗ ಬಿರು ಬಿಸಿಲಿಗೆ ಭೂಮಿ ಬಾಯಿ ಬಿಟ್ಟು ಗೋವಿನ ಜೋಳ ಶೇಂಗಾ ಸಂಪೂರ್ಣ ಒಣಗಿದ್ದು ಹತ್ತಿ ಬೆಳೆ ಕುಂಠಿತಗೊAಡಿದ್ದು ಮಾಡಿದ ಖರ್ಚು ಬರೆದಂತ ಸ್ಥಿತಿ ನಿರ್ಮಾಣವಾಗಿದೆ.
ಇಡೀ ಗದಗ ಜಿಲ್ಲೆಯನ್ನೇ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಸಮಗ್ರ ರೈತ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಮಾಗಡಿ ಚನ್ನಪ್ಪ ಷಣ್ಮುಖಿಟಾಕಪ್ಪ ಸಾತಪೂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.