
ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯೋತ್ಸವ ಹಾಗೂ ಶ್ರೀ ನಾರಾಯಣ ಗುರು ಪತ್ತಿನ ಸಹಕಾರ ಸಂಘದ ಉದ್ಘಾಟನೆ ಅಂಗವಾಗಿ ಇಂದು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ, ಜಗತ್ ವೃತ್ತದವರೆಗೆ ನಾರಾಯಣ ಗುರುಗಳ ಪುತ್ಥಳಿಯ ಭವ್ಯ ಮೆರವಣಿಗೆ ಜರುಗಿತು. ಹಲವಾರು ಮುಖಂಡರು,ಸಮಾಜ ಬಾಂಧವರು ಪಾಲ್ಗೊಂಡರು.






























