
ಔರಾದ್ : ಪ್ರಯಾಣಿಕರನ್ನು ನಿಗದಿತ ಬಸ್ನಲ್ಲಿ ಕರೆದೊಯ್ಯುತ್ತಿದ್ದರೂ, ಕೈಯಲ್ಲಿರುವ ಟಿಕೆಟ್ ಮಾತ್ರ ಬೇರೆ ಬಸ್ಗೆ ಸೇರಿರುವ ವಿಚಿತ್ರ ಘಟನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಡಿಯನ್ ಕಾಂಗ್ರೆಸ್ ಬ್ರಿಗೇಡ್ ರಾಜ್ಯಾಧ್ಯಕ್ಷ ಅನಿಲಕುಮಾರ ನಿರ್ಮಳೆ ಆಗ್ರಹಿಸಿದ್ದಾರೆ.
ಕಳೆದ 27/08/2026 ರಂದು ಬೀದರ ಘಟಕ 1ರ ಕಾ 38 ಈ889 ನಲ್ಲಿ ಪ್ರಯಾಣಿಕರು ಬಸ್ನಲ್ಲಿ ಕುಳಿತು ಪ್ರಯಾಣ ಆರಂಭಿಸಿದ ಬಳಿಕ ಟಿಕೆಟ್ ಪರಿಶೀಲಿಸಿದಾಗ ಅದು ಏಂ 38 ಈ 1113 ಆಗಿರುತ್ತದೆ, ತಾವು ಪ್ರಯಾಣಿಸುತ್ತಿರುವ ಬಸ್ನ ಬದಲಾಗಿ ಬೇರೆ ಬಸ್ನ ಟಿಕೆಟ್ ನೀಡಿರುವುದು ಪ್ರಯಾಣಿಕರು ಗೊಂದಲಕ್ಕೀಡಾಗಿದ್ದು, ಸಾರಿಗೆ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಾದರು ತಾವು ಪ್ರಯಾಣಿಸುವ ಬಸ್ ಅಪಘಾತಕ್ಕಿಡಾದರೆ ಅನಾನುಕೂಲತೆಗಳಾಗುವ ಸಂಭವ ಎದುರಾಗುತ್ತದೆ, ‘ಪ್ರಯಾಣ ಒಂದು ಬಸ್ನಲ್ಲಿ, ಟಿಕೆಟ್ ಮತ್ತೊಂದು ಬಸ್’ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಟಿಕೆಟ್ ವಿತರಿಸುವ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಮೂಡಿವೆ.
ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಟಿಕೆಟ್ ವಿತರಣೆ ಹಾಗೂ ಪರಿಶೀಲನಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಂತಹ ಗೊಂದಲಗಳಿಗೆ ಕಡಿವಾಣ ಹಾಕಿ, ಪ್ರಯಾಣಿಕರಿಗೆ ಸರಿಯಾದ ಬಸ್ನ ಟಿಕೆಟ್ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ಮಳೆ ಆಗ್ರಹಿಸಿದ್ದಾರೆ.
ಸಾರಿಗೆ ಸಂಸ್ಥೆಯ ಹೆಸರಿಗೆ ಧಕ್ಕೆ
‘ಪ್ರಯಾಣ ಒಂದು ಬಸ್ನಲ್ಲಿ, ಟಿಕೆಟ್ ಮತ್ತೊಂದು ಬಸ್ನದು’ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಹಣ ಜೇಬಿಗೆ ಇಳಿಸುವ ಪ್ರಯತ್ನ ಎದ್ದು ಕಾಣುತ್ತಿದ್ದೆ. ಸರ್ಕಾರಕ್ಕೂ ಹಾಗೂ ಸಾರ್ವಜನಿಕ ಪ್ರಯಾಣಿಕರ ಜೀವ ಭದ್ರತೆಯ ಜೊತೆ ಆಟ ಆಡುವುದರಿಂದ ಸಾರ್ವಜನಿಕರಿಗೆ ಸಂಸ್ಥೆಯ ಮೇಲಿರುವ ವಿಶ್ವಾಸ ಸಂಪೂರ್ಣ ಹಾಳಾಗಿ ಹೋಗುತ್ತದೆ ಸಂಸ್ಥೆಯ ಗೌರವ ಕಾಪಾಡಲು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಅನೀಲಕುಮಾರ ನಿರ್ಮಳೆ ಎಚ್ಚರಿಸಿದ್ದಾರೆ.
ಬಸ್ ಬದಲಾವಣೆ ಆದಾಗ ಈ ರೀತಿ ಆಗಿರುತ್ತದೆ ಯಾವುದೇ ಅವ್ಯವಹಾರ ಇಲ್ಲ.
ಸಾರಿಗೆ ಇಲಾಖೆಯ ಬಸ್ ನಲ್ಲಿ ಟಿಕೆಟ್ ವ್ಯವಹಾರದಲ್ಲಿ ಯಾವುದೇ ದೋಷಗಳು ಕಂಡು ಬಂದಿರುವುದಿಲ್ಲ, ಟಿಕೆಟ್ ನೀಡುವ ಯಂತ್ರ ನಿಯಮಿತವಾಗಿ ಚಲಿಸುವ ಬಸ್ ಗೆ ನೋಂದಣಿ ಮಾಡಿರುತ್ತದೆ, ಏನಾದರು ಆ ಬಸ್ ಕೆಟ್ಟು ನಿಂತಾಗ ಬೇರೆ ಬಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಬಸ್ ಟಿಕೆಟ್ ವ್ಯವಹಾರದಲ್ಲಿ ಯಾವುದೇ ದೋಷಗಳು ಕಂಡು ಬಂದಿರುವುದಿಲ್ಲ ಎಂದು ಔರಾದ ಘಟಕ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ಸ್ಪಷ್ಟಪಡಿಸಿದ್ದಾರೆ.































