ಕಲಬುರಗಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ದುರುದ್ದೇಶದಿಂದ ಕೂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಅಜಯ್ ಲಲ್ಲು,ಶಾಸಕರಾದ ಎಂ.ವೈ ಪಾಟೀಲ,ಜಗದೇವ ಗುತ್ತೇದಾರ,ಬಿ.ಆರ್ ಪಾಟೀಲ,ಮೇಯರ್ ಅಜ್ಮಲ್ ಗೋಲಾ,ಕುಡಾ ಅಧ್ಯಕ್ಷ ಮಜರ್ ಅಲಂಖಾನ್,ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮುಖಂಡರಾದ ಡಾ.ಕಿರಣ ದೇಶಮುಖ,ಶಕೀಲ್ ಸರಡಗಿ, ಸಂತೋಷ ಪಾಟೀಲ ದಣ್ಣೂರ,ಶಾಮ ನಾಟೀಕಾರ,ರಾಜೀವ ಜಾನೆ,ವೀರಣ್ಣ ಝಳಕಿ,ಶಿವಾನಂದ ಹೊನಗುಂಟಿ ಹಾಗೂ ಇತರರು ಉಪಸ್ಥಿತರಿದ್ದರು.