
ಬಸವಕಲ್ಯಾಣ: ಭಕ್ತಿಯಿಂದ ಗುರು ಸಾನಿಧ್ಯಕ್ಕೆ ಬಂದರೆ ಅಂತಹವರ ಬಾಳಿನಲ್ಲಿ ಗುರುವಿನ ಅನುಗ್ರಹದಿಂದ ಭರವಸೆಯ ಬೆಳ್ಳಿ ಕಿರಣ ಮೂಡುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ಗುರುವಂದನೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯನ ತಪ್ಪು ನಡತೆಯಿಂದ ಇಲ್ಲವೇ ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಿಂದಾಗಿ ತೀವ್ರವಾದ ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ.
ಇಂತಹ ಸನ್ನಿವೇಶಗಳಲ್ಲಿ ಮನುಷ್ಯ ನಿರಾಶೆಗೊಂಡು ಹತಾಶ ಸ್ಥಿತಿಗೆ ಬರುವುದು ಸಹಜ, ಇಂತಹವರು ಭಕ್ತಿಯ ವ್ಯಾಕುಲತೆಯಿಂದ ಗುರುಚರಣಕ್ಕೆ ಶರಣಾದರೆ ಜೀವನದಲ್ಲಿ ಮತ್ತೆ ಸಮೃದ್ದಿಯ ನವೋದಯವಾಗುತ್ತದೆ.
ಗುರುವಿನ ಅಗಾಧ ಶಕ್ತಿಯ ಆಶ್ರಯದಲ್ಲಿ ಬಾಳು ಬೆಳಗುತ್ತದೆ ಎಂದು ನುಡಿದ ಶ್ರೀಗಳು ಎಲ್ಲರಿಗೂ ಸನ್ಮಂಗಳವಾಗಲೆಂದು ಶುಭ ಹಾರೈಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಜಿ.ಎಸ್. ಮಾಲಿ ಪಾಟೀಲ, ಪಂಡಿತರಾವ ದೇಗಾಂವ, ಶಿವಪುತ್ರ ಶೀಲವಂತ, ಚನ್ನಪ್ಪ ದಾಮ, ನಾಗಣ್ಣ ಪೀರಜೆ, ರಾಜಕುಮಾರ ಹಂಜಿಗೆ, ಗುರು ದೇಗಾಂವ ಭಾಗವಹಿಸಿದ್ದರು.
ವಿಠಲ ಹೂಗಾರ ನಿರೂಪಣೆ ಮಾಡಿದರು.
ಮದ್ಯ ಸೋಮವಾರ ನಿಮಿತ್ಯ ರಾತ್ರಿವಿಡಿ ಭಜನೆ ಸೇವೆ ಸಲ್ಲಿಸಿದ ಪರಮೇಶ್ವರ ಭಜನಾ ಸಂಘ ಯಲ್ಲದಗುಂಡಿ, ಹನುಮಾನ ಭಜನಾ ಸಂಘ ಸೈದಾಪೂರ, ಹನುಮಾನ ಭಜನಾ ಸಂಘ ಖೇರ್ಡ್ ಕೆ, ಹನುಮಾನ ಭಜನಾ ಸಂಘ ಕೋಹಿನೂರ ವಾಡಿ, ಹನುಮಾನ ಭಜನಾ ಸಂಘ ಗದಲೇಗಾಂವ ಬಿ, ಜೈ ಹನುಮಾನ ಭಜನಾ ಸಂಘ ನರೋಣಾ, ಬಸವೇಶ್ವರ ಭಜನಾ ಸಂಘ ಕೊತ್ತಲಿ, ಹನುಮಾನ ಭಜನಾ ಸಂಘ ಲೆಂಗಟಿ, ಕಲ್ಮೇಶ್ವರ ಭಜನಾ ಸಂಘ ಕೊತ್ತಲಿ, ಮಹಾದೇವ ಭಜನಾ ಸಂಘ ಸಿರಗಾಪೂರ, ಸಿದ್ದೇಶ್ವರ ಭಜನಾ ಸಂಘ ಖಜೂರಿ, ಮಹಾದೇವ ಭಜನಾ ಸಂಘ ಮುಡಬಿ ವಾಡಿ, ಹನುಮಾನ ಭಜನಾ ಸಂಘ ಚಿಕ್ಕನಾಗಾಂವ ವಾಡಿ, ಹನುಮಾನ ಭಜನಾ ಸಂಘ ಬಟಗೇರಾ ವಾಡಿ, ಶರಣಬಸವೇಶ್ವರ ಭಜನಾ ಸಂಘ ಚಿಕ್ಕನಾಗಾಂವ, ನಂದಿ ಬಸವೇಶ್ವರ ಭಜನಾ ಸಂಘ ಕಿಣ್ಣಿ ಸುಲ್ತಾನ, ಹನುಮಾನ ಭಜನಾ ಸಂಘ ಚಿಕ್ಕನಾಗಾಂವ, ಮಹಾದೇವ ಭಜನಾ ಸಂಘ ಕಲಕೋರಾ, ಹನುಮಾನ ಭಜನಾ ಸಂಘ ನವನಿಹಾಳ, ಬುದ್ಧ ಬಸವ ಅಂಬೇಡ್ಕರ್ ಭಜನಾ ಸಂಘ ಸಿರಗಾಪೂರ, ಹನುಮಾನ ಭಜನಾ ಸಂಘ ಮುಡಬಿವಾಡಿ, ಭಜರಂಗಬಲಿ ಭಜನಾ ಸಂಘ ಘಾಟ ಹಿಪ್ಪರ್ಗಾ, ಪರಮೇಶ್ವರ ಭಜನಾ ಸಂಘ ಎಕಲೂರ, ಹನುಮಾನ ಭಜನಾ ಸಂಘ ಖಾನಾಪುರ, ರಾಮಲಿಂಗೇಶ್ವರ ಭಜನಾ ಸಂಘ ಘಾಟ ಹಿಪ್ಪರ್ಗಾ, ಬೀರಲಿಂಗೇಶ್ವರ ಭಜನಾ ಸಂಘ ಗುಂಡೂರ, ಬೀರಲಿಂಗೇಶ್ವರ ಭಜನಾ ಸಂಘ ಭೋಸಗಾ, ಹನುಮಾನ ಭಜನಾ ಸಂಘ ಖೇರ್ಡ್ ಕೆ. ವಾಡಿ, ಕವಿಗಾರ ಶಿವಶರಣಪ್ಪ ದೇಗಾಂವ, ಶರಣಪ್ಪ ಹತ್ತರಗಾ, ವಿಮಲಾಬಾಯಿ ರಾಜಾಪೂರ ಕಲಬುರಗಿ, ಜಗದೇವಿ ರಾಜಾಪೂರ ಕಲಬುರಗಿ ಹಾಗೂ ಶರಣಬಸಯ್ಯ ಮಠ ಕಲಬುರಗಿ (33 ಭಜನಾ ಸಂಘ) ಭಜನಾ ಸಂಘದವರಿಗೆ ಹಾರಕೂಡದ ಪರಮಪೂಜ್ಯರು ಸತ್ಕರಿಸಿ ಆಶೀರ್ವದಿಸಿದರು.
ಧರ್ಮ ಸಭೆಗೂ ಮುನ್ನ ಮಧ್ಯ ಸೋಮವಾರ ನಿಮಿತ್ಯ ಹಾರಕೂಡ ಗ್ರಾಮದಲ್ಲಿ ಸದ್ಗುರು ಚನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.































