
ಬೆಂಗಳೂರು, ಅ.೮: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗುಂಜೂರು?ದೊಮ್ಮಸಂದ್ರ?ವರ್ತೂರು ರಸ್ತೆ ಅಗಲೀಕರಣ ಕಾಮಗಾರಿಗೆ ವೇಗ ನೀಡಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಭೂಸ್ವಾಧೀನ, ಟಿಡಿಆರ್, ವಿದ್ಯುತ್ ಕಂಬಗಳ ಸ್ಥಳಾಂತರ ಸೇರಿದಂತೆ ಬಾಕಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಸ್‌ಎಚ್?೩೫ರ ಭಾಗವಾಗಿರುವ ದೊಮ್ಮಸಂದ್ರ?ಗುಂಜೂರು ನಡುವಿನ ೨ ಕಿ.ಮೀ. ಹಾಗೂ ಗುಂಜೂರು?ವರ್ತೂರು ನಡುವಿನ ೧.೯ ಕಿ.ಮೀ. ರಸ್ತೆ ಅಭಿವೃದ್ಧಿ ಕುರಿತು ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಆರ್‌ಎಂಪಿ?೨೦೧೫ರ ಅನ್ವಯ ರಸ್ತೆಯನ್ನು ೫೦ ಮೀಟರ್‌ಗೆ ಅಗಲೀಕರಿಸುವ ಗುರಿ ಹೊಂದಲಾಗಿದೆ.
೬೦೦ ಮೀಟರ್ ಕಾಮಗಾರಿ ಬಾಕಿ
ದೊಮ್ಮಸಂದ್ರ ಭಾಗದ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಗುಂಜೂರು?ದೊಮ್ಮಸಂದ್ರ ನಡುವಿನ ೨ ಕಿ.ಮೀ. ಪೈಕಿ ೧.೪ ಕಿ.ಮೀ. ಕಾಮಗಾರಿ ಮುಗಿದಿದೆ. ಉಳಿದ ೬೦೦ ಮೀಟರ್ ಪ್ರದೇಶದಲ್ಲಿ ಭೂಸ್ವಾಧೀನ ಮತ್ತು ಟಿಡಿಆರ್ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಆರು ಪಥದ ರಸ್ತೆಗಾಗಿ ಕಾಯದೆ, ಲಭ್ಯವಿರುವ ಜಾಗದಲ್ಲಿ ನಾಲ್ಕು ಪಥದ ರಸ್ತೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಆಯುಕ್ತರು ಸೂಚಿಸಿದ್ದಾರೆ. ಬಾಕಿ ಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಜಾಗಗಳ ಗಡಿಯನ್ನು ಮರುಸರ್ವೇ ನಡೆಸಿ ಗುರುತಿಸುವಂತೆ ಸೂಚಿಸಲಾಗಿದ್ದು, ಪ್ರತಿ ೧೦ರಿಂದ ೨೦ ಮೀಟರ್ ಅಂತರದಲ್ಲಿ ಕಂಬ ಅಥವಾ ಕೆಂಪು ಗುರುತು ಅಳವಡಿಸಲು ನಿರ್ದೇಶಿಸಲಾಗಿದೆ.
೧೪೩ ಆಸ್ತಿಗಳಿಗೆ ಸಂಬಂಧಿಸಿದ ಟಿಡಿಆರ್ ಅಧಿಸೂಚನೆ ಹಿಂಪಡೆಯಲಾಗಿರುವ ಹಿನ್ನೆಲೆಯಲ್ಲಿ ಅದರ ಅಧಿಕೃತ ಪ್ರತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವರ್ತೂರು ಸೇತುವೆ ಭಾಗದ ೨೦ ಆಸ್ತಿಗಳ ಪೈಕಿ ೬ಕ್ಕೆ ಟಿಡಿಆರ್ ನೀಡಲಾಗಿದ್ದು, ೯ ಆಸ್ತಿಗಳ ಟಿಡಿಆರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಉಳಿದ ಆಸ್ತಿ ಮಾಲೀಕರೊಂದಿಗೆ ಸಭೆ ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹಾಗೂ ಬಾಕಿ ಇರುವ ೯ ಆಸ್ತಿಗಳಿಗೆ ಡಿಆರ್‌ಸಿ ವಿತರಣೆ ತ್ವರಿತಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.
ವಿನಾಯಕ ಥಿಯೇಟರ್‌ನಿಂದ ವಿಶಾಲ್ ಮಾರ್ಟ್‌ವರೆಗೆ ೬೫ ಆಸ್ತಿಗಳ ಪೈಕಿ ೩೫ ಆಸ್ತಿಗಳಿಗೆ ಪಾವತಿ ಪೂರ್ಣಗೊಂಡಿದ್ದು, ಉಳಿದ ೩೦ ಆಸ್ತಿಗಳ ಪಾವತಿ ಪ್ರಕ್ರಿಯೆ ಚುರುಕುಗೊಳಿಸಲು ಸೂಚಿಸಲಾಗಿದೆ. ಆಸ್ತಿ ಸಂಖ್ಯೆ ೩೪ಕ್ಕೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಪೊಲೀಸ್ ಭದ್ರತೆಯೊಂದಿಗೆ ಜಾಗದ ಸ್ವಾಧೀನ ಪಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ರಸ್ತೆ ಕಾಮಗಾರಿಗೆ ಅಡ್ಡಿಯಾಗಿರುವ ತಾತ್ಕಾಲಿಕ ಚರಂಡಿಗಳನ್ನು ಮುಖ್ಯ ಚರಂಡಿಗೆ ಸಂಪರ್ಕಿಸಿ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಚರಂಡಿ ಮೇಲ್ಭಾಗದಲ್ಲಿ ಕನಿಷ್ಠ ೨ ಮೀಟರ್ ಅಗಲದ ಪಾದಚಾರಿ ಮಾರ್ಗ ಕಲ್ಪಿಸುವಂತೆ ನಿರ್ದೇಶನ ನೀಡಲಾಗಿದೆ.
ಬಾಕಿ ಇರುವ ವಿದ್ಯುತ್ ಕಂಬಗಳು ಹಾಗೂ ಒಂದು ಟ್ರಾನ್ಸ್‌ಫಾರ್ಮರ್‌ನ್ನು ನಾಲ್ಕು ದಿನಗಳೊಳಗೆ ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪೆಟ್ರೋಲ್ ಬಂಕ್ ದಾಖಲೆ ಪರಿಶೀಲನೆ
ಬೆಳ್ಳಂದೂರು ಅಮಾನಿಕೆರೆ ಬಳಿ ರಸ್ತೆ ಮತ್ತು ರ?ಯಾಂಪ್ ಕಾಮಗಾರಿಗೆ ಅಡ್ಡಿಯಾಗಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನ ಟ್ರೇಡ್ ಲೈಸೆನ್ಸ್, ಕಟ್ಟಡ ಪರವಾನಗಿ, ಒಸಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.


























