Home ಮುಖಪುಟ ಸುದ್ದಿ ಸ್ಟಿಂಗ್ ಕಾರ್ಯಾಚರಣೆ ತನಿಖೆಗೆ ಹಿಂದೇಟೇಕೆ- ಹೆಚ್‌ಡಿಕೆ ಪ್ರಶ್ನೆ

ಸ್ಟಿಂಗ್ ಕಾರ್ಯಾಚರಣೆ ತನಿಖೆಗೆ ಹಿಂದೇಟೇಕೆ- ಹೆಚ್‌ಡಿಕೆ ಪ್ರಶ್ನೆ

ಬೆಂಗಳೂರು, ಅ. ೧೨- ರಾಜ್ಯದಲ್ಲಿ ಸ್ಟಿಂಗ್ ಕಾರ್ಯಾಚರಣೆ ನಡೆದಿರುವ ಬಗ್ಗೆ ತನಿಖೆ ಆಗಲೇಬೇಕು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತನಿಖೆಗೆ ಇನ್ನೇಟು ಹಾಕುತ್ತಿರುವುದು ಏಕೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸ್ಟಿಂಗ್ ನಡೆಯುತ್ತಿರುವ ಬಗ್ಗೆ ಮಾತನಾಡಿದ್ದಾರೆ ತನಿಖೆ ಆಗಬೇಕು ಎಂದು ಅವರು ಹೇಳಿದ್ದಾರೆ ಹೀಗಿರುವಾಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತನಿಖೆಗೆ ಯಾಕೆ ನಿರ್ಧಾರ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.


ಎಲ್ಲದ್ದಕ್ಕೂ ಕಾಲಕೂಡಿಬರುತ್ತೆ ಎಂದು ಸಿಎಂ ಹೇಳಿಕೆಗೆ ಪ್ರತಿಕ್ರಿಸಿದ ಅವರು ಟೈಮ್ ಯಾವಾಗ ಬರುತ್ತೆ ಮೇಲುಗಡೆಯಿಂದ ಹಾಗೆ ಟೈಮ್ ಬರುತ್ತಾ ಎಂದು ವ್ಯಂಗ್ಯವಾಡಿ, ಕಾಲ ಉತ್ತರ ಕೊಡುತ್ತೆ ಅಂತ ಹೇಳುತ್ತಿದ್ದಾರೆ. ಸಿಎಂ ಕಾಲ ಉತ್ತರ ಕೊಡೊದು ಅಲ್ಲಾ.


ರಾಜ್ಯ ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ .ಮಾಜಿ ಸಿಎಂ ನಿನ್ನೆ ಸ್ಟಿಂಗ್ ಆಗ್ತಿರೋದು ನಿಜ ಅಂತ ಹೇಳಿದ್ದಾರೆ.
ಯಾರು ಇದ್ದಾರೆ ಅನ್ನೋದನ್ನ ಕಂಡುಹಿಡಿಯಬೇಕು. ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಂತ ಯಾಕೆ ಹೇಳಿದ್ದಾರೆ.
ತನಿಖೆ ಆಗಬೇಕು ಅಂತ ಅವರು ಹೇಳ್ತಿದ್ದಾರೆ.


ಯಾತಕ್ಕಾಗಿ ನೀವು ಸುಮ್ಮನೆ ಇದ್ದೀರಾ. ತನಿಖೆ ಮಾಡಿಸೋಕೆ ಏನ್ ಕಷ್ಟ ನಿಮಗೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲಸಕ್ಕೆ ಬಾರದೆ ಇರೋದನ್ನ ತನಿಖೆ ಮಾಡಿಸ್ತಿದ್ದಿರಿ. ಇದಕ್ಕೆ ಯಾಕೆ ಅವಕಾಶ ಕೊಟ್ಟಿಲ್ಲ
ಸರ್ಕಾರ ಯಾಕೆ ತನಿಖೆಗೆ ಕೊಡ್ತಿಲ್ಲಾ. ಇವರೇ ನೇರವಾಗಿ ಇದ್ದಾರಲಾ, ಇವರೇ ಮೂಲ ಮಹಾನ್ ನಾಯಕ ಅಂತರಲ್ಲಾ
ತನಿಖೆ ಮಾಡುದ್ರೆ ಇದೆಲ್ಲಾ ಹೊರಗೆ ಬರುತ್ತೆ ಅನ್ನುವ ಭಯ ಎಂದು ಲೇವಡಿ ಮಾಡಿದರು.


ನೀವೆ ತೋರಿಸಿದ್ರಲ್ಲಾ ಫೈಲ್ ಇಡುಕೊಂಡು ಹೋಗಿದ್ದು ಫೈಲ್ ನ ಕ್ಯಾಬಿನೆಟ್‌ಗೆ ಇವರೇ ತಗೊಂಡು ಹೋಗಿರೋದು
ಸ್ಟಿಂಗ್ ಅಪರೇಷನ್ ಮಾಹಿತಿ ತೆಗೆದುಕೊಂಡೆ ಕ್ಯಾಬಿನೆಟ್ ಗೆ ಹೋಗಿದ್ದಾರೆ. ಅವರೇ ಸ್ಟಿಂಗ್ ಸೋರ್ಸ್ ಲೀಕ್ ಮಾಡಿರೋದು ಯಾತಕ್ಕಾಗಿ ಮಾಡಿರೋದು ಸಣ್ಣ ವಿಚಾರನಾ, ಮಾನ ಮರ್ಯಾದೆ ಯಾರದ್ದು ಹೋಗ್ತಿದೆ. ಯಾರ ಮರ್ಯಾದಿ ಕಳೆಯೋದಕ್ಕೆ ಇವೆಲ್ಲಾ ಮಾಡಿಕೊಂಡ್ರಿ.


ತನಿಖೆ ಮಾಡದೆ ಗುಪ್ತವಾಗಿ ಇಟ್ಟುಕೊಂಡು ಕಾಲ ಉತ್ತರ ಕೊಡುತ್ತೆ ಅಂದ್ರೆ ಆಗುತ್ತಾ ನಿಮ್ಮವರೆ ಹೇಳಿದ್ದಾರಲ್ಲಾ ಕ್ಯಾಮೆರಾ ಇಡಕೊಂಡು ಉತ್ತರ ಭಾರತದಿಂದ ಬಂದಿದ್ರು ಅಂತ ಹೇಳಿದ್ದಾರಲ್ಲಾ ಉತ್ತರ ಭಾರತದವರು, ಕೇಂದ್ರ ಸಚಿವರು ಅಂತ ನೀವೆ ಹೇಳಿಸಿಕೊಂಡು ಕೂತಿದ್ದಿರಲ್ಲಾ.


ನಿಮ್ಮ ಪೆನ್ ಡ್ರೈವ್ ವಿಚಾರ ಬಂದಾಗೆಲ್ಲಾ ಈ ವಿಚಾರ ಚರ್ಚೆ ಆಗ್ತಿದೆ ಎಂಬ ವಿಚಾರ.. ನನ್ನ ಸ್ಟೈಲ್ ನಲ್ಲಿ ಮಾಡೋಕೆ ಆಗೊಲ್ಲಾ ಅವರಿಗೆ ನನ್ನ ಪೆನ್ ಡ್ರೈವ್ ವರ್ಜಿನಲ್ , ಅವರು ನಕಲಿ ಮಾಡೋದು ನಾನು ಇಲ್ಲಿ ಪೆನ್ ಡ್ರೈವ್ ಅಂದ್ರೆ ಅಲ್ಲಿ ಅವರಿಗೆ ನಡುಕ ಶುರುವಾಗುತ್ತೆ ಸತ್ಯಾಸತ್ಯತೆ ಹೊರಗೆ ಬರಲೇಬೇಕು. ಇದನ್ನ ಅಷ್ಟು ಸುಲಭವಾಗಿ ಬಿಡೋದಕ್ಕೆ ಅಗೊಲ್ಲಾ ಎಂದರು.


ನಮ್ಮ ರಾಜ್ಯ ಅತ್ಯಂತ ಗೌರವವುಳ್ಳ ರಾಜ್ಯ. ಕ್ಯಾಬಿನೆಟ್ ನಲ್ಲಿ ಸಿಎಂ ಚರ್ಚೆ ಮಾಡಿ ಮಾದ್ಯಮದಲ್ಲಿ ಬಿಟ್ಟವರು ಯಾರು.
ನಾವು ಕೇಂದ್ರದಲ್ಲಿ ಹಲವಾರು ವಿಚಾರ ಚರ್ಚೆ ಮಾಡ್ತಿವಿ ಅದು ಹೊರಗೆ ಬರುತ್ತಾ. ನೀವೇ ದೊಡ್ಡದಾಗಿ ಪ್ರಚಾರ ಮಾಡ್ತಿದ್ದಿರಾ ಎಂದು ಟೀಕಿಸಿದರು.


ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಖಡಿತ ಮಾಡಿದಾರೆ ಅನ್ನೋ ಆರೋಪ ಮಾಡಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಗೆ ಕೇಳ್ತೇನೆ. ಈ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬರ್ತಿರೋದು ಹೊಸದಲ್ಲ ಎಂದರು.