
ಚಿಕ್ಕಬಳ್ಳಾಪುರ,ಜು.೩೦.:ಸಮಾಜ ದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರೆ ಯಾವುದಾದರೂ ಒಂದು ರಚನಾತ್ಮಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂಬುದು ಸಿ.ವಿ. ವೆಂಕಟರಾಯಪ್ಪ ಆಶಯ ಆಗಿತ್ತು,ಅವರ ಆಶಯದಂತೆ ನಾವು ಮುನ್ನಡೆಯುತ್ತಿದ್ದೇವೆ ಎಂದು ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ. ವಿ. ನವೀನ್ ಕಿರಣ್ ತಿಳಿಸಿದರು.
೩೦ನೇ ದತ್ತಿ ದಿನಾಚರಣೆ ಹಾಗೂ ೧೧೧ನೇ ಶ್ರೀ ಸಿವಿವಿ ಜಯಂತಿ ಅಂಗವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಳ ಮತ್ತು ಹೊರ ರೋಗಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು,ಇಂದು ಸಿವಿವಿರ ಜನ್ಮದಿನವಾಗಿದ್ದು ಈ ದಿನವನ್ನು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ವಿಜೃಂಭಣೆಯಿಂದ ನೆರವೇರಿಸುತ್ತೇವೆ ಹಾಗೂ ಸಿ.ವಿ.ವಿ.ರವರು ಕಂಡ ಕನಸನ್ನು ಮನಸು ಮಾಡುವತ ನಾವೆಲ್ಲ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರಾರಂಭಿಕವಾಗಿ ಇಂದಿನ ಕಾರ್ಯಕ್ರಮದ ಕ್ಯಾಂಪಸ್ ನಲ್ಲಿರುವ ಶ್ರೀ ಸರ್ವ ವಿಜ್ಞ ನಿವಾರಕ ಮಹಾ ಗಣಪತಿ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ದತ್ತಿ ದಿನಾಚರಣೆ ಕಾರ್ಯಕ್ರಮ ಆರಂಭವಾಗುತ್ತದೆ. ತದನಂತರ ಕೆ ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ಸಿ.ವಿ. ವೆಂಕಟರಾಯಪ್ಪ ಮತ್ತು ಎರಡು ದತ್ತಿಗಳ ಪ್ರಧಾನ ಪೋಷಕ ಸಿಬಿವಿ ಧರ್ಮಪತ್ನಿ ಶ್ರೀಮತಿ ಸಿ.ವಿ. ಕಮಲಮ್ಮರ ಸ್ಮಾರಕಗಳಿಗೆ ದತ್ತಿ ಆಶ್ರಯದಲ್ಲಿ ನಿರ್ವಹಣೆ ಮಾಡುತ್ತಿರುವ ಎಲ್ಲಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಂದ ಹಾಗೂ ಸಿಬ್ಬಂದಿ ವರ್ಗದವರಿಂದ ಮತ್ತು ಶ್ರೀ ಸಿವಿವಿ ರವರ ಅಭಿಮಾನಿಗಳಿಂದ ಪುಷ್ಪ ನಮನ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಧರ್ಮ ಗ್ರಂಥಗಳ ಪಠಣ ತತ್ವ ತಿತ ಭಜನೆ ಕಾರ್ಯಕ್ರಮ ನಡೆಯುತ್ತದೆ. ಇದಾದ ನಂತರ ಶ್ರೀ ಛಿvv ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ವೇದಿಕೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಈ ಎಲ್ಲಾ ಅತ್ಯಂತ ಯಶಸ್ವಿ ಪೂರ್ಣವಾಗಿ ನೆರವೇರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ನವೀನ್ ಕಿರಣ್ ತಿಳಿಸಿದರು.
ಈ ಸಂದರ್ಭದಲ್ಲಿ ದತ್ತಿ ಹಿತೈಷಿಗಳಾದ ಇಮ್ರಾನ್ ಖಾನ್ ಕೆ.ವಿ. ಕನ್ನಡ ವಿದ್ಯಾಸಂಸ್ಥೆಯ ಮುಖ್ಯಸ್ಥ ಈಶ್ವರಯ್ಯ ಕೆ ವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್ ವೆಂಕಟೇಶ್ ಪಿಪಿಎಚ್‌ಎಸ್ ಪ್ರಾಂಶುಪಾಲ ನಾರಾಯಣಸ್ವಾಮಿ ಉಪಾಧ್ಯಾಯ ಎಂಎಸ್ ಕಾಟಾಪುರ ಮಠ ಕೆವಿ ಆಂಗ್ಲ ಶಾಲೆಯ ಗಿರೀಶ್ ದತ್ತಿ ಸಿಬ್ಬಂದಿ ವರ್ಗ ನಿವೃತ್ತ ಉಪಾಧ್ಯಾಯ ಹೆಚ್ .ವಿ .ಅನಿಲ್ ಕುಮಾರ್ ಎಂ ನಾರಾಯಣಸ್ವಾಮಿ ಒಳಗೊಂಡಂತೆ ಮತ್ತಿತರರು ಉಪಸ್ಥಿತರಿದ್ದರು.


































