ಕಲಬುರಗಿ: ಜಿಲ್ಲೆಯಲ್ಲಿರುವ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸರಕಾರ ನಿಗದಿ ಪಡಿಸಿದ ಕನಿಷ್ಟ ವೇತನ ಜಾರಿ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತಿ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕಾರ್ಯದರ್ಶಿ ಮಮ್ಮದ್ ಜಮೀರುದ್ದಿನ್, ಅಲ್ಲಾ ಪಟೇಲ್, ನಾಗರತ್ನ ಮದನಕರ್, ಪರಶುರಾಮ, ಮೇಘರಾಜ ಕಠಾರೆ, ಬಾಬು ಹೊಸಮನಿ, ರವಿ ಯರಗೋಳ, ಲಕ್ಷ್ಮೀಪುತ್ರ ಕಲ್ಯಾಣಿ, ನರಸಮ್ಮ ಕೊಂಡಪಳ್ಳಿ, ನಾಗರಾಜ, ನರಸಮ್ಮ ಚಂದನಕೇರಾ ಇದ್ದರು.