
ಕಲಬುರಗಿ,ಜು 30: ಶಿಕ್ಷಕನ ಸಕಾಲಿಕ ಮಾರ್ಗದರ್ಶನಕ್ಕೆ ವಿದ್ಯಾರ್ಥಿಯ ದಿಕ್ಕನ್ನೇ ಬದಲಾಯಿಸಿ ಉತ್ತಮ ಭವಿಷ್ಯದ ಕಡೆಗೆ ಕೊಂಡೊಯ್ಯುವ ಶಕ್ತಿ ಇದೆ. ಗುರುವಿನ ಮಾರ್ಗದರ್ಶನ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದಡೆಗೆ, ಕೆಟ್ಟದರಿಂದ ಒಳ್ಳೆಯತನದೆಡೆಗೆ ಕರೆದೊಯುತ್ತದೆ. ಗುರು ಕೇವಲ ವ್ಯಕ್ತಿಯಲ್ಲ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕಿನೆಡೆಗೆ ಕೊಂಡ್ಯೊಯುವ ಶಕ್ತಿ ಯಾಗಿದ್ದಾನೆ. ನಾಡೋಜ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್ ಅವರು ತಮ್ಮ ಅನುಭವದ ನುಡಿಮುತ್ತುಗಳ ಮೂಲಕ ಮುಂಜಾವಿಗೊಂದು ನುಡಿಕಿರಣಗಳನ್ನು ನಮ್ಮ ಬಾಳು ಬೆಳಗಲು ನೀಡಿದ್ದಾರೆ. ಅವರ ಜ್ಞಾನದ ಕಿರಣಗಳ ಬೆಳಕಿನಲ್ಲಿ ನಡೆದು ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ತಲುಪಬೇಕೆಂದು ಪೂಜ್ಯಶ್ರೀ ಮಹಾಂತ ಸ್ವಾಮಿಗಳು ಮುಂಜಾವಿಗೊಂದು ನುಡಿ ಕಿರಣಗಳ ದರ್ಶನ ಮಾಡಿಸಿದ್ದಾರೆ. “ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಅವರ ನುಡಿಮುತ್ತುಗಳು ಬದುಕಿಗೆ ದಾರಿದೀಪ” ಎಂದು ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ ರಾಯಚೂರು, ಕಲಬುರ್ಗಿಯ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ್ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ 9 ದಿನಗಳ ವಿಶೇಷ ಪ್ರವಚನ ಮಾಲಿಕೆಯ 6ನೇ ದಿನದ ಮುಂಜಾವಿಗೊಂದು ನುಡಿ ಕಿರಣ-365″ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನ ಮೊದಲ ಗುರುವೆಂದರೆ ತಾಯಿ, ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು , ಜನನಿಯಿಂದ ಕಲಿತ ಜನರೇ ಧನ್ಯರು, ಅಂತಹ ಮಾತೃತ್ವ ಹೃದಯದ ನ್ಯಾಯಮೂರ್ತಿಗಳ ಅನುಭವದ ನುಡಿ ಕಿರಣಗಳ ಬೆಳಕನ್ನು ಪ್ರವಚನದ ಮೂಲಕ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಬದುಕನ್ನು ಉಜ್ವಲ ಗೊಳಿಸುಕೊಳ್ಳಬೇಕೆಂದು ಪೂಜ್ಯ ಗುರುಗಳು ಹಾರೈಸಿದರು.
ತಂದೆ ತಾಯಿ ಶಿಕ್ಷಕರೊಂದಿಗೆ ಪ್ರಕೃತಿಯು ನಮಗೆ ಗುರುವಾಗಿ ಮಾರ್ಗದರ್ಶನ ಮಾಡುತ್ತದೆ ಭೂಮಿ ತಾಯಿ ಸಹನೆ ತಾಳ್ಮೆ ಯನ್ನು ಕಲಿಸಿದರೆ ನೀರು ಜೀವನದ ಬಹುದೊಡ್ಡ ಸಂಪತ್ತು ಸಮಾನತೆಯ ಗುಣ, ಕಠಿಣತೆ ಕರಗಿಸುವ ಗುಣ, ಮನಸ್ಸಿಗೆ ತಂಪು ನೀಡುವ ಗುಣ, ಕಲಿಸುತ್ತದೆ ಶಿಕ್ಷಣ, ಜ್ಞಾನ, ಅನ್ನ, ನೀರು, ಉತ್ತಮ ನುಡಿಮುತ್ತುಗಳು, ಸುಭಾಷಿತಗಳು, ಯು ಬೆಲೆ ಬಾಳುವ ಅಮೂಲ್ಯ ರತ್ನಗಳು ಇವುಗಳ ಮಹತ್ವವನ್ನು ತಿಳಿಸುವ ಗುರುವಿನ ಮಹತ್ವ ಅಪಾರವಾಗಿದೆ ಗುರುಗಳ ಮಾರ್ಗದರ್ಶನದಲ್ಲಿ ನಡೆದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಕಾರ ಮೂರ್ತಿಗಳಾಗಬೇಕೆಂದು ಮಹಾಂತ ಸ್ವಾಮಿಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಪೆÇ್ರ. ಚನ್ನಾರೆಡ್ಡಿ ಪಾಟೀಲ್, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರೆಡ್ಡಿ ಪಾಟೀಲ್, ಪ್ರಾಚಾರ್ಯ ಪ್ರಶಾಂತ್ ಕುಲಕರ್ಣಿ, ವಿನುತಾ ಆರ್. ಬಿ., ಅನಿತಾ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ್ ಕುಲಕರ್ಣಿ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.































