Home ಜಿಲ್ಲೆ ಕಲಬುರಗಿ ಜೂಜಾಟ:ನಾಲ್ವರ ಬಂಧನ

ಜೂಜಾಟ:ನಾಲ್ವರ ಬಂಧನ

ಕಲಬುರಗಿ,ಜು.30-ನಗರದ ನೆಹರು ಗಂಜ್‍ನ ಎಪಿಎಂಸಿ ಬಳಿಯ ಅಂಬಾಭವಾನಿ ದೇವಸ್ಥಾನ ಹತ್ತಿರದ ಸಾರ್ವಜನಿಕ ಶೌಚಾಲಯ ಹಿಂದುಗಡೆ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ತಾರಾಸಿಂಗ್ ಚವ್ಹಾಣ್, ಸಿಬ್ಬಂದಿಗಳಾದ ಶಿವಾನಂದ, ಸುರೇಶ, ಬಂದೇನವಾಜ್ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಚಂದ್ರಕಾಂತ ಬಂಡಪ್ಪ ಎಕಲೂರ, ಅಶೋಕ ಬಸವರಾಜ ಸರಡಗಿ, ಮಲ್ಲಿಕಾರ್ಜುನ ಸುಭಾಶ್ಚಂದ್ರ ಪರಸ್ತಿ ಮತ್ತು ಗಣೇಶ್ ರೇವಣಸಿದ್ದಪ್ಪ ಬಿರಾದಾರ ಎಂಬುವವರನ್ನು ಬಂಧಿಸಿ 13670 ರೂ.ನಗದು, 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.