
ಕಲಬುರಗಿ,ಆ.5-ಜೇವರ್ಗಿ ತಾಲ್ಲೂಕಿನ ಯಡ್ರಾಮಿ ಮತ್ತು ನೆಲೋಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ಕಾಚಾಪೂರ, ತೆಲಗಬಾಳ ಮತ್ತು ಹರವಾಳ ಗ್ರಾಮದ ಹಳ್ಳದ ಹತ್ತಿರವಿರುಗ ನೀರೆತ್ತುವ ಮೋಟಾರ್ ಮತ್ತು ಸ್ಟಾರ್ಟರ್, ಫ್ಯೂಜ್ ಹಾಗೂ ಆಟೋ ಸ್ಟಾರ್ಟರ್‍ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಹಾಪೂರ ತಾಲ್ಲೂಕಿನ ಗೋಗಿ ತಾಂಡಾದ ಕಿಶನ್ ತಂದೆ ಟೋಪು ಜಾಧವ್ ಬಂಧಿಸಿ, ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆಗೆ ಒಳಪಡಿಸಿ ಅವರಿಂದ ಕಳ್ಳತನ ಮಾಡಿದ 5 ನೀರೆತ್ತುವ ಮೋಟಾರ್, 3 ಸ್ಟಾರ್ಟರ್ ಹಾಗೂ ಕೇಬಲ್ ವೈರ್‍ನ್ನು ವಶಪಡಿಸಿಕೊಂಡಿದ್ದಾರೆ.
ಜೇವರ್ಗಿ ತಾಲ್ಲೂಕಿನ ಯಡ್ರಾಮಿ ಮತ್ತು ನೆಲೋಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ಕಾಚಾಪೂರ, ತೆಲಗಬಾಳ ಮತ್ತು ಹರವಾಳ ಗ್ರಾಮದ ಹಳ್ಳದ ಹತ್ತಿರವಿರುಗ ನೀರೆತ್ತುವ ಮೋಟಾರ್ ಮತ್ತು ಸ್ಟಾರ್ಟರ್, ಫ್ಯೂಜ್ ಹಾಗೂ ಆಟೋ ಸ್ಟಾರ್ಟರ್‍ಗಳನ್ನು ಕಳವು ಮಾಡಿದ ಪ್ರಕರಣದ ಆರೋಪಿಗಳ ಪತ್ತೆಗೆ ಗ್ರಾಮೀಣ ಉಪ ವಿಭಾಗದ ಡಿವೈಎಸ್‍ಪಿ ಲೋಕೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಜೇವರ್ಗಿ ಸಿಪಿಐ ಬಾಪುಗೌಡ ಅವರ ನೇತೃತ್ವದಲ್ಲಿ ಯಡ್ರಾಮಿ ಪೊಲೀಸ್ ಠಾಣೆ ಪಿಎಸ್‍ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಸುರೇಶಕುಮಾರ, ಹೈದರಸಾ, ಶಿವಾನಂದ, ಸಿದ್ದರಾಮ, ದೊಡ್ಡಬಸಪ್ಪ, ಬಾಷಾಸಾಬ ಮತ್ತು ಮೌಲಪ್ಪ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.































