Home ಜಿಲ್ಲೆ ಕಲಬುರಗಿ ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆ: ಫೆಲೋಶಿಪ್‍ಗೆ ಅರ್ಜಿ ಆಹ್ವಾನ

ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆ: ಫೆಲೋಶಿಪ್‍ಗೆ ಅರ್ಜಿ ಆಹ್ವಾನ

ಕಲಬುರಗಿ,ಅ.6:ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ “ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆಯಡಿ”, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪೆÇೀಸ್ಟ್-ಡಾಕ್ಟರಲ್ ಫೆಲೋಶಿಪ್ ಕಾರ್ಯಕ್ರಮಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಫೆಲೋಶಿಪ್ ಒಂದು ವರ್ಷದ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಇದು ಪೂರ್ಣಕಾಲಿಕ, ತಾತ್ಕಾಲಿಕ ಮತ್ತು ವರ್ಗಾಯಿಸಲಾಗದ ಹುದ್ದೆಯಾಗಿದ್ದು, ಭಾರತದಲ್ಲಿ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಯಡಿ ಆಯ್ಕೆಯಾಗುವ ಅಭ್ಯರ್ಥಿಗಳು ಸಿಯುಕೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪೆÇೀಸ್ಟ್-ಡಾಕ್ಟರಲ್ ಸಂಶೋಧನಾ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ.
ಶೈಕ್ಷಣಿಕ ಅರ್ಹತೆಗಳು, ಸಹಪರಿಶೀಲಿತ ಶೋಧನಾ ಪ್ರಕಟಣೆಗಳು ಹಾಗೂ ಮನ್ನಣೆಗಳನ್ನು ಒಳಗೊಂಡಂತೆ ಉತ್ತಮ ಹಾಗೂ ಸಾಬೀತಾದ ಶೈಕ್ಷಣಿಕ ಮತ್ತು ಸಂಶೋಧನಾ ದಾಖಲೆಯನ್ನು ಹೊಂದಿರುವ ಅರ್ಹ ಸಂಶೋಧಕರಿಗೆ ಈ ಪೆÇೀಸ್ಟ್-ಡಾಕ್ಟರಲ್ ಫೆಲೋಶಿಪ್ ನೀಡಲಾಗುತ್ತದೆ.
ಈ ಯೋಜನೆಯ ಅರ್ಹತಾ ಮಾನದಂಡಗಳು, ನಿಯಮಗಳು ಮತ್ತು ಷರತ್ತುಗಳು, ಫೆಲೋಶಿಪ್ ಮೊತ್ತ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಸಿಯುಕೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ಡೀನ್ ಪ್ರೊ.ಆರ್.ಎಸ್.ಹೆಗಡಿ ಅವರನ್ನು ಸಂಪರ್ಕ ಮಾಡಬಹುದು ಮೊ : 9604085138, ( rshegadi@cuk.ac.in,) ಅಥವಾ ವಿ.ವಿ.ಯ ಅಧಿಕೃತ ಜಾಲತಾಣವನ್ನು (www.cuk.ac.in) ವೀಕ್ಷಿಸಬಹುದು.(https://www.cuk.ac.in/Admission2026/PostDoc%20Call-1.pdf