Home ಜಿಲ್ಲೆ ಕಲಬುರಗಿ ಹಿಂದೂ ಮಹಾಸಮಾವೇಶಕ್ಕೆ ವಿಶ್ವಕರ್ಮ ಸಮಾಜ ಬೆಂಬಲ

ಹಿಂದೂ ಮಹಾಸಮಾವೇಶಕ್ಕೆ ವಿಶ್ವಕರ್ಮ ಸಮಾಜ ಬೆಂಬಲ

ಕಲಬುರಗಿ,ಸೆ.27: ಕಲಬುರಗಿ ನಗರದಲ್ಲಿ ನಾಳೆ ( ಸೆ. 27) ಕನ್ನೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಹಾಗೂ ಹಿಂದೂ ಯುವ ನಾಯಕ ಚಂದು ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಮಹಾಸಮಾವೇಶಕ್ಕೆ ಕಲಬುರಗಿ ವಿಶ್ವಕರ್ಮ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾನಂದ ಮಹಾಸ್ವಾಮಿಗಳು, ಮತ್ತು ದೊಡ್ಡೇಂದ್ರ ಮಹಾಸ್ವಾಮಿಗಳು ಅವರು ಮಾತನಾಡಿ,ರೈತರು, ಯುವಕರು ಹಾಗೂ ಸಮಾಜದ ಅಭಿವೃದ್ಧಿಯ ಬಗ್ಗೆ, ಅಪಾರ ಕಾಳಜಿ ಹೊಂದಿರುವ ಪೂಜ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶಾಂತಿ, ಸೌಹಾರ್ದತೆ, ಸಾಮಾಜಿಕ ಒಗ್ಗಟ್ಟು ಮತ್ತು ಸಂಘಟನೆಯ ಸಂದೇಶವನ್ನು ಸಮಾಜಕ್ಕೆ ನೀಡುವ ಈ ಮಹತ್ವದ ಸಮಾವೇಶಕ್ಕೆ ನಮ್ಮ ವಿಶ್ವಕರ್ಮ ಸಮಾಜದ ಹಾಗೂ ನಮ್ಮ ಮಠಾಧೀಶರ ಸಂಪೂರ್ಣ ಬೆಂಬಲವಿದೆ ಎಂದರು.
ವಿಶೇಷವಾಗಿ, ಯುವಕರಿಗೆ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯ ಮಾರ್ಗದರ್ಶನ, ಶಿಕ್ಷಣ ಹಾಗೂ ಭವಿಷ್ಯದ ಅವಕಾಶಗಳ ಕುರಿತು ದಾರಿದೀಪವಾಗಬೇಕು. ಜೊತೆಗೆ ಸಣ್ಣ-ಸಣ್ಣ ಸಮಾಜಗಳ ಸಮಸ್ಯೆಗಳು, ಆಶಯಗಳು ಮತ್ತು ಅಭಿವೃದ್ಧಿಯ ವಿಚಾರಗಳಿಗೆ ವೇದಿಕೆಯಲ್ಲಿ ಸೂಕ್ತ ಮಾರ್ಗದರ್ಶನ ದೊರೆಯಬೇಕು.ಎಲ್ಲಾ ಸಮಾಜಗಳ ಗುರುಗಳು, ಮಠಾಧೀಶರು, ಮುಖಂಡರು, ಯುವಕರು ಹಾಗೂ ಬಾಂಧವರು ಪರಸ್ಪರ ಗೌರವದಿಂದ ಒಂದಾಗಿ ಸಾಗುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಯ ವಾತಾವರಣವನ್ನು ಬಲಪಡಿಸೋಣ ಎಂದರು. ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಹೋರಾಟ ಸಮೀತಿ ಅಧ್ಯಕ್ಷ ದೇವೀಂದ್ರ ದೇಸಾಯಿ ಕಲ್ಲೂರ,
ಮುಖಂಡರಾದ ಮನೋಹರ ಪೋದ್ದಾರ, ಲೋಹಿತ ಕಲ್ಲೂರ, ಕಮಲಾಕಾರ ಅಣಕಲ್, ದಶರಥ ಮಾಡಿಯಾಳ, ರಾಜು ಖೇಳಗಿ, ರಾಕೇಶ ಮಾಡಿಯಾಳ ಸೇರಿದಂತೆ ಹಲವರಿದ್ದರು