Home ಮುಖಪುಟ ಸುದ್ದಿ ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೇ

ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೇ

ಬೆಂಗಳೂರು, ಅ. ೨೯- ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರಬಹುದು. ಆದರೆ, ಮುಂದೆ ನಡೆಯುವ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.


ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್‌ನ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಬಿಜೆಪಿ ಗೆದ್ದಿತ್ತು. ಈಗ ಒಂದು ಸ್ಥಾನ ಹೆಚ್ಚು ಗೆದ್ದಿದ್ದಾರೆ. ನಾವು ಪ್ರಯತ್ನ ಮಾಡಿದ್ದರೆ ಒಂದು ಸ್ಥಾನ ಗೆಲ್ಲಬಹುದಿತ್ತು. ಏನೇ ಇರಲಿ, ಈ ಚುನಾವಣೆಯಲ್ಲಿ ಸೋತಿದ್ದರೂ ಮುಂದೆ ನಾವು ಗೆಲ್ಲುತ್ತೇವೆ ಎಂದರು.


ಅಶೋಕ್ ವಿರುದ್ಧ ಕಿಡಿ


ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪಂಚೆ ವಿರುದ್ಧ ಮಾಡಿರುವ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಖರ್ಗೆ ಅವರ ಪಂಚೆ ಬಗ್ಗೆ, ಅವರ ನಡಗೆ ಬಗ್ಗೆ ಅಶೋಕ್ ಟೀಕೆ ಮಾಡಿದ್ದಾರೆ. ಈ ರೀತಿಯ ಟೀಕೆ ಪ್ರತಿಪಕ್ಷ ನಾಯಕರಿಗೆ ಗೌರವ ತರಲ್ಲ ಎಂದರು.


ಪ್ರತಿಪಕ್ಷ ನಾಯಕರಾಗಿರುವ ಅಶೋಕ್ ಹೀಗೆಲ್ಲಾ ಹೇಗೆಂದರೆ ಹಾಗೆ ನಾಲಿಗೆ ಉದ್ದ ಬಿಟ್ಟರೆ ಇದರಿಂದ ಅವರಿಗೆ ಸ್ಥಾನ ಸಿಗವುದು. ಹಾಗಾಗಿ ಖರ್ಗೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಇದು ಸರಿಯಲ್ಲ ಎಂದರು.


ಪ್ರಧಾನಿ ಮೋದಿ ಅವರು ದಿನಕ್ಕೆ ಮೂರು ಸೂಟು ಬದಲಿಸುತ್ತಾರೆ. ಅವರು ಕಟ್ಟುವ ವಾಚ್, ಬಳಕೆ ಮಾಡುವ ಪೆನ್ನ ಬೆಲೆ ಗೊತ್ತೆ. ಯಾರು ಮಾತನಾಡಲ್ಲ ಎಂದು ಹೇಳಿದರು.


ಭಾರತ-ಪಾಕಿಸ್ಥಾನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಹೇಳಿದ್ದಾರೆ. ಅದರ ಬಗ್ಗೆ ಮಾತನಾಡುವ ಧಮ್ಮು ಬಿಜೆಪಿ ನಾಯಕರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು.
ಮಣಿಪುರದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ .ಆ ಬಗ್ಗೆ ತುಟಿಕ್ ಪಿಟಿಕ್ ಅಂದಿಲ್ಲ. ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಎನ್‌ಜಿ ಪ್ರತಿಭಟನೆ ಯಾವ ಬಗ್ಗೆಯೂ ಬಿಜೆಪಿ ನಾಯಕರು ಮಾತನಾಡಲ್ಲ ಎಂದು ಹರಿಹಾಯ್ದರು.


ನಮ್ಮ ರಾಜ್ಯದ ನೆಲ-ಜಲ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ಈ ಬಗ್ಗೆಯೂ ಬಿಜೆಪಿಯವರು ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದರು.