Home ಜಿಲ್ಲೆ ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

ನವಲಗುಂದ,ಅ೨೯ : ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಿಶೇಷ ಚೇತನ ಕ್ರೀಡಾಕೂಟದಲ್ಲಿ ನವಲಗುಂದ ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿ ರಾಕೇಶ ಉಮೇಶ ಗದಗ ಭರ್ಚಿ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.


ಈ ಕ್ರೀಡಾ ಪಟುವನ್ನು ಶಾಲೆಯ ಚೇರಮನ್ನರು ಹಾಗೂ ಕಾರ್ಯದರ್ಶಿಗಳು, ಉಪಾಧ್ಯಾಕ್ಷರು, ಆಡಳಿತ ಮಂಡಳಿಯ ಸರ್ವ ನಿರ್ದೇಶಕರು ಮತ್ತು ಮುಖ್ಯಾಧ್ಯಾಪಕರಾದ ಜಿ. ಎಮ್. ಮಾಕಣ್ಣವರ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್. ಎನ್. ಲಮಾಣಿ ಸಿ. ಎಮ್. ಕಟಗಿ, ಎಸ್. ಎಮ್. ದೊಡಮನಿ, ಎಸ್. ಬಿ. ಕಲಾವಂತ, ಜಿ. ಎಮ್. ಮುಕ್ರಿ, ಯು. ಎಸ್. ಪೂಜಾರ, ಎಮ್. ಎಸ್. ಹಿರೇಮಠ, ಎಮ್. ಎಮ್. ಸಂಶಿ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.