Home ಜಿಲ್ಲೆ ಪ್ರವಚನ ಕಾರ್ಯಕ್ರಮ

ಪ್ರವಚನ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರ,ಅ೨೯: ಆಸ್ತಿ ಗಳಿಸುವುದು ಒಂದು ಭಾಗ ಆದರೆ ಅದನ್ನು ಸಂಭ್ರಮಿಸುವುದೇ ನಿಜವಾದ ಶ್ರೀಮಂತರ ಜೀವನ ಕಲೆ ಎಂದು ಬಾಲಗಾಂವ ಯೋಗಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಸ್ವಾಮಿಜಿ ಹೇಳಿದರು.


ತಾಲೂಕಿನ ಎಂಕೆಹುಬ್ಬಳ್ಳಿ-ಹೊಳೆಹೊಸೂರ ಮಾರ್ಗದ ಮಧ್ಯ ಹೊಂದಿಕೊAಡಿರುವ ಜಗದೀಶ ಹಾರೂಗೊಪ್ಪ ಅನುಭವಮಂಟಪ ಮಂಗಲ ಕಾರ್ಯಾಲಯದಲ್ಲಿ ನಡೆದ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭವ್ಯವಾದ ಬಂಗ್ಲೆ ಕಟ್ಟಿದರೂ ಸುತ್ತಲೂ ಸೂರ್ಯನ ಬೆಳಕು, ತಂಪಾದ ಗಾಳಿ, ಹೂವುಗಳು ಅರಳದಿದ್ದರೆ, ಮನಸ್ಸಿಗೆ ನೆಮ್ಮದಿ ಸಿಗದಿದ್ದರೆ, ಸಂತೋಷ ಮತ್ತು ತೃಪ್ತಿಯನ್ನು ಹಣದಿಂದ ಪಡೆಯಲು ಎಂದಿಗೂ ಸಾಧ್ಯವಿಲ್ಲ. ನಾವು ಏನಾದರೂ ಸಾಧನೆ ಮಾಡಿದರೆ ನಮ್ಮ ಮನಸ್ಸಿಗೆ ಅದನ್ನು ಆನಂದಿಸುತ್ತಾ ನೆಮ್ಮದಿಯಿಂದ ಬದುಕುವುದು ಒಂದು ಕಲೆಯಾಗಿದೆ ಎಂದರು.

ನಮ್ಮನ್ನು ಹಿಂದೆ ಹಾಕಲು ಪ್ರಯತ್ನಿಸುವವರ ಅಸೂಯೆ-ದ್ವೇಷಕ್ಕೆ ಮಣಿಯದೇ ಮುನ್ನುಗ್ಗಬೇಕು ನಾವು ಅವರನ್ನು ಕಂಡು ಅಸೂಯೆ ಪಡುವುದಕ್ಕಿಂತ ಸಂತೋಷಪಡಬೇಕು. ಅಂದಾಗ ನಮ್ಮ ಜೀವನ ಸುಖಮಯವಾಗುತ್ತದೆ. ಶರಣರ ಪ್ರವಚನಗಳು ಅಜ್ಞಾನ ದೂರ ಮಾಡಿ ಜ್ಞಾನ ಬೆಳಕು ನೀಡುತ್ತವೆ. ಆದ್ದರಿಂದ ಸಂತರ-ಶರಣರ ವಚನ ಕೇಳುವುದಷ್ಟೇ ಅಲ್ಲದೇ ಅವುಗಳನ್ನು ಜೀವನದಲ್ಲಿ ಬೆರೆಸಿಕೊಳ್ಳಬೇಕು. ಅನ್ನ, ನೀರು, ಗಾಳಿ ಪ್ರತಿ ಮನುಷ್ಯನಿಗೆ ಅಮೂಲ್ಯ ರತ್ನಗಳಾಗಿವೆ ಅವು ಇಲ್ಲದಿದ್ದರೆ ಊಸಿರು ನಿಲ್ಲುತ್ತದೆ. ಸಮಾಜದಲ್ಲಿ ಶಾಂತಿ ದೊರೆಯಬೇಕಾದರೆ ಸಂತ್ಸAಗಗಳ ಅವಶ್ಯಕತೆಯಿವೆ ಎಂದರು.


ಮುಮ್ಮಿಗಟ್ಟಿ ಬಸವಾನಂದ ಶ್ರೀಗಳು, ಧಾರವಾಡದ ಡಾ. ಆನಂದ ಸ್ವಾಮಿಜೀ, ಗರಗದ ಆತ್ಮಾನಂದ ಶ್ರೀಗಳು ಮಾತನಾಡಿದರು. ಡಾ. ದಂತವೈದ್ಯ ಜಗದೀಶ ಹಾರೂಗೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರವಚನ ನಂತರ ದಾಸೋಹ ಸೇವೆ ಸಲ್ಲಿಸಿದ ಫಕ್ಕೀರಪ್ಪ ಬಣ್ಣೂರ ಹಾಗೂ ಶಂಕ್ರಪ್ಪ ತ್ಮುರಗುದ್ದಿ ಅವರನ್ನು ಸಮಿತಿಯಿಂದ ಸತ್ಕರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಆರ್.ಎಸ್.ಎಸ್. ಪ್ರಮುಖ. ದೆಹಲಿ ಬಸವರಾಜ ಪಾಟೀಲ ಮಾತನಾಡಿದರು.


ಕಾರ್ಯಕ್ರಮದಲ್ಲಿ ಸಮಾಜಸೇವಕರು ಸಿದ್ರಾಮ ತಳವಾರ, ಮಡಿವಾಳಪ್ಪ ಸುತಗಟ್ಟಿ, ಡಿ.ಆರ್. ಪಾಟೀಲ, ಮಹಾಂತೇಶ ಅಮಟೂರ, ಬಸವರಾಜ ಪೂಜಾರ, ಅದೃಶ್ಯಪ್ಪ ಕುಂಬಾರ, ಇಟ್ನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.