
ಬೆಂಗಳೂರು, ಅ. ೨೯- ಸಹಕಾರ ಇಲಾಖೆಯಿಂದ ಯುವಜನರಿಗೆ ಉದ್ಯೋಗ ದೊರಕಿಸಲು ಹೊಸ ಯೋಜನೆಯೊಂದನ್ನು ರೂಪಿಸುವುದಾಗಿ ಸಹಕಾರ ಸಚಿವ ಲಕ್ಷ್ಮಣಸವದಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಇಲಾಖೆಯ ಲೆಕ್ಕ ಪತ್ರ ಪರಿಶೀಲನೆಗೆ ಸಂಬಂಧಿಸಿದಂತೆ ಯುವಜನರಿಗೆ ಆಡಿಟಿಂಗ್ ತರಬೇತಿ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಮೂಲಕ ಯೂವಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದರು
ಪದವಿ, ಎಂಬಿಎ, ಎಂಕಾಂ ಸೇರಿದಂತೆ ವಿವಿಧ ಉನ್ನತ ಪದವಿ ಪಡೆದಿರುವವರಿಗೆ ಸಹಕಾರ ಇಲಾಖೆಯ ಆಡಿಟ್ ಬಗ್ಗೆ ತರಬೇತಿ ನೀಡಲಾಗುವುದು. ಆರು ತಿಂಗಳ ತರಬೇತಿ ಇದಾಗಿದೆ. ತರಬೇತಿ ನಂತರ ಅವರಿಗೆ ಖಾಯಂ ಉದ್ಯೋಗ ನೀಡುತ್ತೇವೆ ಎಂದರು.
ಈ ತರಬೇತಿಗೆ ಆರು ತಿಂಗಳಿಗೆ ಹತ್ತು ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬೆಂಗಳೂರು ಮೈಸೂರು, ಬೆಳಗಾವಿ ಸೇರಿದಂತೆ ೮ ಕಡೆ ಈ ತರಬೇತಿ ನೀಡಲಾಗುತ್ತದೆ. ೫-೬ ಸಾವಿರ ಜನರಿಗೆ ತರಬೇತಿ ನೀಡಿ ಉದ್ಯೋಗ ನೀಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಸಚಿವ ಲಕ್ಷ್ಮಣಸವದಿ ಹೇಳಿದರು.
ಚಾರ್ಟೆಡ್ ಅಕೌಂಟೆಟ್‌ಗಳು ಎಲ್ಲ ಕಡೆ ಹೋಗಿ ಆಡಿಟ್ ಮಾಡಲ್ಲ. ಅವರು ಮೊಹರು ಮಾತ್ರ ಒತ್ತುತ್ತಾರೆ. ಆಡಿಟಿಂಗ್‌ನಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ತರಬೇತಿ ಯುವಜನರಿಗೆ ಉದ್ಯೋಗ ಒದಗಿಸುವ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎಂದರು.


























