
ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಳಸಿದ ಅನುಚಿತ ಪದಪ್ರಯೋಗ ಖಂಡಿಸಿ ಇಂದು ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕದಿಂದ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಎನ್.ರವಿಕುಮಾರ, ಡಾ.ಅವಿನಾಶ ಜಾಧವ,ಡಾ. ಬಿ.ಜಿ ಪಾಟೀಲ, ಚಂದು ಪಾಟೀಲ,ಅಶೋಕ ಬಗಲಿ,ರಾಜಕುಮಾರ ಪಾಟೀಲ ತೇಲ್ಕೂರ,ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ,ಡಾ. ಸುಧಾ ಹಾಲಕಾಯಿ ಅವರು ಸೇರಿದಂತೆ ಅನೇಕ ಮುಖಂಡರು,ಕಾರ್ಯಕರ್ತರು ಪಾಲ್ಗೊಂಡರು.























