Home ಜಿಲ್ಲೆ ಕಲಬುರಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ದಿವ್ಯೌಷಧಿ: ಡಾ. ಖಾಜಾವಲಿ ಈಚನಾಳ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ದಿವ್ಯೌಷಧಿ: ಡಾ. ಖಾಜಾವಲಿ ಈಚನಾಳ

ಜೇವರ್ಗಿ: ಶತಶತಮಾನಗಳಿಂದ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಜ್ಞಾನ, ಅಂಧಃಕಾರ,ಅಸಮಾನತೆ ಅಸ್ಪೃಶ್ಯತೆ, ಜಾತೀಯತೆ, ಲಿಂಗತಾರತಮ್ಯಗಳ ನಿರ್ಮೂಲನೆಗಾಗಿ ಶರಣರು ತಮ್ಮ ಕ್ರಾಂತಿಕಾರಕ ವೈಚಾರಿಕ ಚಳುವಳಿ ಹುಟ್ಟು ಹಾಕಿದರು. ಅವರ ಚಳುವಳಿ ಸಾಮಾಜಿಕ ಧಾರ್ಮಿಕ, ಆರ್ಥಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿತು ಎಂದು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಖಾಜಾವಲಿ ಈಚನಾಳ ಹೇಳಿದರು.
ಅವರು ಜೇವರ್ಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಯ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜೇವರ್ಗಿ ತಾಲೂಕಾ ಘಟಕದಿಂದ ಏರ್ಪಡಿಸಿದ್ದ 7ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು. ಮುಂದುವರೆದು ಮಾತನಾಡಿದ ಅವರು, ವಚನ ಸಾಹಿತ್ಯದಲ್ಲಿ ಉತ್ತಮ ಮೌಲ್ಯಗಳಿವೆ.
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ದಿವ್ಯೌಷಧಿ ಯಾಗಿದೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವ ರಂತಹ ಮಹಾಪುರುಷರ ಚಿಂತನೆಗಳು ಕೇವಲ ಭಾಷಣಕ್ಕೆ ಬಂಡವಾಳ ವಾಗಬಾರದು. ಅವರ ತತ್ವ ಸಿದ್ಧಾಂತಗಳು ನಮ್ಮ ನಿತ್ಯದ ಬದುಕಿನ ಭಾಗವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಸಮಾರೋಪ ಕಾರ್ಯಕ್ರಮದ ಸಾನಿಧ್ಯವನ್ನು ಡಾ. ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಚನ್ನಮಲ್ಲಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು.
ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಶಾಂತಲಿಂಗ ಪಾಟೀಲ್ ನಿರ್ಣಯ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಎಂ.ಎಸ್ ಹಿರೇಮಠ. ಸಂಗನಗೌಡ ಮಾಲಿಪಾಟೀಲ್. ಸಿದ್ದು ಬಿ ಅಂಗಡಿ. ನಿಂಗಣ್ಣ ಭಂಡಾರಿ,ಬಿ ಎಂ ಪಾಟೀಲ್ ಕಲ್ಲೂರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಕೆ ಬಿರಾದಾರ, ಶ್ರೀ ಹರಿ ಕರ್ಕಿಹಳ್ಳಿ ಉಪಸ್ಥಿತರಿದ್ದರು. ಕವಿತಾ ಹಳ್ಳಿ ನಿರೂಪಿಸಿದರು. ಸಿದ್ರಾಮ ಕಟ್ಟಿ ಸ್ವಾಗತಿಸಿದರು. ಬಿ ಜಿ ಹೂಗಾರ ವಂದಿಸಿದರು.
ಸಮರೋಪ ಕಾರ್ಯಕ್ರಮದ ನಂತರ ಗಂಗಾವತಿ ಪ್ರಾಣೇಶ್ , ಬಸವರಾಜ್ ಮಹಾಮನಿ, ನರಸಿಂಹ ಜೋಶಿ ಹಾಸ್ಯ ಕಲಾವಿದರಿಂದ ನಗೆ ಹಬ್ಬ ನಡೆಯಿತು.