ಕಲಬುರಗಿ:ಲೋಕೋಪಯೋಗಿ ಸಚಿವ ಹಾಗೂ ವಾಲ್ಮೀಕಿ ಸಮಾಜದ ನಾಯಕ ಸತೀಶ ಜಾರಕಿಹೊಳಿ ಮತ್ತು ಅವರ ಕುಟುಂಬದವರ ಮೇಲೆ ನಡೆದಿರುವ ಇಡಿ ದಾಳಿಯನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ನಂದಕುಮಾರ ಮಾಲಿಪಾಟೀಲ, ದಿನೇಶ ದೊಡ್ಡಮನಿ, ಸುನೀಲ ಮಾನ್ಪಡೆ, ಶಿವಕುಮಾರ, ಶರಣು ಸುಬೇದಾರ, ದೇವು ನಾಯಕ, ಅಶೋಕ ನಾಯಕ ಸೇರಿದಂತೆ ಮತ್ತಿತರರು ಇದ್ದರು.