ಕಲಬುರಗಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದನ್ನು ಮತ್ತು ಲೋಕಸಭಾ ವಿರೋಧ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಮಹಾತ್ಮಾ ಗಾಂಧೀಜಿ ಪ್ರತಿಮೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯವರೆಗೆ ಮೌನ ಪಾದಯಾತ್ರೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ, ಉಪಾಧ್ಯಕ್ಷರಾದ ಮಹಾಂತೇಶ ಕೌಲಗಿ, ಮಲ್ಲಪ್ಪ ಎಂ.ಹೊಸಮನಿ, ದಿನೇಶ ದೊಡ್ಡಮನಿ, ಮೋದಿನ್ ಪಟೇಲ್, ಶರಣು ಶಾಸ್ತ್ರಿ, ಹರೀಶ ಖಾನಾಪೂರ, ಹುಲಿಗೆಪ್ಪ ಕನಕಗಿರಿ, ಭೀಮಾಶಂಕರ ನಾಗನಳ್ಳಿ, ಪ್ರಶಾಂತ ಕೊರಳ್ಳಿ, ಈರಣ್ಣ ಝಳಕಿ, ಆಸಿಫ್ ಗಣಗಾಪೂರಿ, ಶಿವಾನಂದ ಹೊನಗುಂಟಿ, ದಶರಥ ಬಂಡಿ, ಭೀಮಾಶಂಕರ ದಂಡೆ, ಸಂತೋಷ ಹಿರೇಮನಿ ಸೇರಿದಂತೆ ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.