
ಕಲಬುರಗಿ,ಸೆ.13: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕನ್ನಡ ವಿಭಾಗ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಸಹಯೋಗದಲ್ಲಿ “ಕನ್ನಡ ಶಾಸ್ತ್ರೀಯ ಜ್ಞಾನ ಪರಂಪರೆ” ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವು ಸೆಪ್ಟೆಂಬರ್ 15 ಮತ್ತು 16 ರಂದು ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಕನ್ನಡದ ವಿವಿಧ ಶಾಸ್ತ್ರ ಗ್ರಂಥಗಳಲ್ಲಿ ಪ್ರಕಟವಾದ ಜ್ಞಾನ ಪರಂಪರೆಯ ಕುರಿತು ವಿದ್ವಾಂಸರಿಂದ ಉಪನ್ಯಾಸ ಮತ್ತು ಸಂವಾದವು ನಡೆಯಲಿದೆ.
ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೆಪ್ಟೆಂಬರ್ 15ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕದ ಹಿರಿಯ ಸಂಶೋಧಕ ಡಾ.ದೇವರ ಕೊಂಡಾರೆಡ್ಡಿಯವರು ಆಶಯ ಭಾಷಣವನ್ನು ನೀಡಲಿದ್ದು, ವಿಭಾಗದ ಮುಖ್ಯಸ್ಥೆ ಪೆÇ್ರ.ಶಿವಗಂಗಾ ರುಮ್ಮಾ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪೆÇ್ರ.ಬಸವರಾಜ ಕೋಡಗುಂಟಿ, ಕಾರ್ಯಕ್ರಮ ಸಂಯೋಜಕ ಡಾ.ಎಲ್.ಆರ್.ಪ್ರೇಮ್ ಕುಮಾರ್ ಹಾಗೂ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪೆÇ್ರ. ಗಣೇಶ್ ಪವಾರ್ ಉಪಸ್ಥಿತರಿರುತ್ತಾರೆ.
ಈ ಕಾರ್ಯಾಗಾರದಲ್ಲಿ 9 ವಿವಿಧ ಗೋಷ್ಠಿಗಳು ನಡೆಯಲಿದ್ದು, ಪೆÇ್ರ.ಸತ್ಯನಾರಾಯಣ ಅವರು “ಶಾಸ್ತ್ರೀಯ ಕನ್ನಡ ಜ್ಞಾನ ಸಂಪತ್ತು ಮತ್ತು ವಿಜ್ಞಾನ ;ಸವಾಲುಗಳು ಮತ್ತು ಹೊಸ ಸಾಧ್ಯತೆಗಳು”, ಪೆÇ್ರ. ಬಸವರಾಜ ಕೋಡಗುಂಟಿ “ಕನ್ನಡ ದ್ವನಿ ವಿಜ್ಞಾನದ 2000 ವರ್ಷಗಳ ಇತಿಹಾಸ”, ಡಾ. ಸಂಗಮೇಶ ಕಲ್ಯಾಣಿ “ಅಮರಗನ್ನಡ ಮತ್ತು ಮೋಡಿ ಲಿಪಿ”, ಪೆÇ್ರ.ಜೆ.ಎಂ. ನಾಗಯ್ಯ “ಮದನ ತಿಲಕಮತ್ತು ಆಧುನಿಕತೆ” ಪೆÇ್ರ. ಶುಭಚಂದ್ರ “ಬಂಧುವರ್ಮನ ಜೀವಸಂಬೋಧನೆ”, ಡಾ. ಡಿ.ಎನ್. ಅಕ್ಕಿ “ಜೈನ ಶಿಲ್ಪಶಾಸ್ತ್ರ”, ಡಾ. ಪ್ರಭು ಡಿ. “ಮಂಗರಸನ ಖಗೇಂದ್ರ ಮಣಿದರ್ಪಣ- ಮಹತ್ವ ಮತ್ತು ಪ್ರಸ್ತುತತೆ”, ಡಾ.ಶೇಷ ಶಾಸ್ತ್ರಿ “ಲಲಿತ ವಿಸ್ತರ”ಎಂಬ ವಿಷಯಗಳ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.
ಸಮಾರೋಪ ಸಮಾರಂಭ ಸೆಪ್ಟೆಂಬರ್ 16ರಂದು ಸಾಯಂಕಾಲ 4.30ಕ್ಕೆ ನಡೆಯಲಿದ್ದು ಹಿರಿಯ ವಿದ್ವಾಂಸ ಡಾ. ಶೇಷಶಾಸ್ತ್ರಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್.ಆರ್.ಬಿರಾದಾರ್ ಮುಖ್ಯ ಅತಿಥಿಗಳಾಗಿ, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪೆÇ್ರ.ಬಸವರಾಜ ಕೋಡಗುಂಟಿ ಅತಿಥಿಗಳಾಗಿ ಭಾಗವಹಿಸಲಿದ್ದು, ಕನ್ನಡ ವಿಭಾಗದ ಮುಖ್ಯಸ್ಥೆ ಪೆÇ್ರ.ಶಿವಗಂಗಾ ರುಮ್ಮಾ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕಾರ್ಯಾಗಾರದ ಸಂಯೋಜಕರಾದ ಡಾ.ರೋಹಿಣಾಕ್ಷ ಅವರು ತಿಳಿಸಿದ್ದಾರೆ.





























