
ವಾಷಿಂಗ್ಟನ್,ಜೂ,೧೩- ಅಮೆರಿಕ- ಇರಾನ್ ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದ ಅಂತಿಮವಾಗುವ ಹಂತದಲ್ಲಿದ್ದು ಹೋರ್ಮುಜ್ ಅನ್ನು ಮತ್ತೆ ಸಂಚಾರಕ್ಕೆ ತೆರೆಯುವ ಸಾಧ್ಯತೆ ಇದೆ ಎಂದು ಇರಾನ್ ಹೇಳಿದೆ.
ಇರಾನ್‌ನಲ್ಲಿ ಹೋರಾಟ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಕಟವಾಗಿದೆ ಮತ್ತು ಹೋರ್ಮುಜ್ ಜಲಸಂಧಿಯನ್ನು ಮತ್ತೆ ಪುನರ್ ಆರಂಭಿಸುವ ಕಾಲ ಸನ್ನಿಹಿತವಾಗಿದೆ ಎಂದಿ ಇರಾನ್ ವಿದೇಶಾಂಗ ಸಚಿವ
ಸೆಯೀದ್ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.
ಒಪ್ಪಂದದಿಂದ ಇರಾನ್ ಮೇಲಿನ ಅಮೆರಿಕದ ದಿಗ್ಬಂಧನ ತೆಗೆದುಹಾಕುವುದು ಸಹ ಒಳಗೊಂಡಿದೆ, ಆದರೆ ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳು ನಂತರ ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.
ಒಪ್ಪಂದದ ಕೆಲವು ವಿವರಗಳನ್ನು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ. ಇರಾನ್‌ಗೆ ಆರ್ಥಿಕ ಪ್ರಯೋಜನಗಳು ಇರಾನ್ ತನ್ನ ಬಾಧ್ಯತೆಗಳನ್ನು ಪೂರೈಸುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಫೆಬ್ರವರಿ ೨೮ ರಂದು ಇರಾನ್‌ನಾದ್ಯಂತ ಅಮೆರಿಕ ಮತ್ತು ಇಸ್ರೇಲಿ ದಾಳಿಗಳೊಂದಿಗೆ ಯುದ್ಧ ಪ್ರಾರಂಭವಾದ ನಂತರ ಕದನ ವಿರಾಮ ಜಾರಿ ಬಳಿಕ ಮತ್ತೆ ಸಂಘರ್ಷ ನಡೆಯುತ್ತಿದೆ. ಇರಾನ್ ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಅಮೆರಿಕ-ಮಿತ್ರ ರಾಷ್ಟ್ರಗಳ ಮೇಲೆ ದಾಳಿಗೆ ಕಾರಣವಾಗಿದೆ.
ವಿಶ್ವದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲಕ್ಕೆ ಪ್ರಮುಖ ಹಡಗು ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮಚ್ಚಿದ್ದು ಭಾರತ ಸೇರಿದಂತೆ ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಏಪ್ರಿಲ್‌ನಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ, ಅಮೆರಿಕ ಮತ್ತು ಇರಾನ್ ಈ ವಾರ ಎರಡು ಸುತ್ತಿನ ಹಗ್ಗ ಜಗ್ಗಾಟ ದಾಳಿ ನಡೆಯುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧದ “ನಿಗದಿತ ದಾಳಿಗಳನ್ನು” ರದ್ದುಗೊಳಿಸಿರುವುದಾಗಿ ಹೇಳಿದ್ದಾರೆ, ಏಕೆಂದರೆ ಸಂಧಾನಕಾರರು “ಒಂದು ಉತ್ತಮ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇರಾನ್ ಮಾಧ್ಯಮ ೧೪ ಅಂಶಗಳ ಒಪ್ಪಂದದ ಕೆಲವು ವಿವರಗಳನ್ನು ಪ್ರಕಟಿಸಿದೆ. “ಒಪ್ಪಿಕೊಂಡ ನಿಯಮಗಳೊಂದಿಗೆ ಯಾವುದೇ ಸಂಬಂಧವಿಲ್ಲ” ಮತ್ತು “ಸತ್ಯಕ್ಕೆ ಯಾವುದೇ ಸಂಬಂಧವಿಲ್ಲ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೆಲವು ಗಂಟೆಗಳ ನಂತರ, ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಸಹಾಯ ಮಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಒಪ್ಪಲಾಗಿದ್ದು ಅಂತಿಮ ಗೊಳಿಸಲು ಕಾಯುತ್ತಿದ್ದೇವೆ ಎಂದಿದ್ದಾರೆ.




























