Home ಜಿಲ್ಲೆ ಕಲಬುರಗಿ 1.40 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು

1.40 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು

ಕಲಬುರಗಿ,ಜೂ.13-ಮನೆಯ ಮುಖ್ಯ ಬಾಗಿಲು ಕೊಂಡಿ ಮುರಿದು ಕಳ್ಳರು ಮನೆಯೊಳಗಿದ್ದ 10 ವರ್ಷಗಳ ಹಿಂದಿನ ಹಳೆಯ 1.20 ಲಕ್ಷ ರೂ.ಮೌಲ್ಯದ ಅರ್ಧ ತೊಲೆಯ 6 ಬಂಗಾರದ ಹರಳಿನ ಉಂಗುರ ಮತ್ತು 10 ವರ್ಷಗಳ ಹಿಂದಿನ ಹಳೆಯ 1.40 ಲಕ್ಷ ರೂ.ಮೌಲ್ಯದ 25 ತೊಲೆ ಬೆಳ್ಳಿ ಕಾಲುಚೈನ ಕಳವು ಮಾಡಿರುವ ಘಟನೆ ನಗರದ ಶಹಾಬಜಾರ ಕಟಗರಪುರದಲ್ಲಿ ನಡೆದಿದೆ.
ಸಚಿನ್ ಶುಕ್ಲಾ ಎಂಬುವವರ ಮನೆ ಬೀಗ ಮುರಿದು ಕಳ್ಳರು ಚಿನ್ನ ಮತ್ತು ಬೆಳ್ಳಿ ಆಭರಣವನ್ನು ದೋಚಿಕೊಂಡು ಹೋಗಿದ್ದು, ಅವರು ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇವರು ಮನೆಗೆ ಬೀಗ ಹಾಕಿಕೊಂಡು ಕುಟುಂಬದ ಸದಸ್ಯರೊಂದಿಗೆ ಹೈದ್ರಾಬಾದಗೆ ತೆರಳಿ ಅಲ್ಲಿಂದ ಪ್ಲೇನ್ ಮುಖಾಂತರ ಗುವಾಹಟಿಯ ಖಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.