Home ಜಿಲ್ಲೆ ಕಲಬುರಗಿ 18,500 ರೂ.ಮೌಲ್ಯದ ಹಿತ್ತಾಳೆ, ತಾಮ್ರದ ಸಾಮಾನು ಕಳವು

18,500 ರೂ.ಮೌಲ್ಯದ ಹಿತ್ತಾಳೆ, ತಾಮ್ರದ ಸಾಮಾನು ಕಳವು

ಕಲಬುರಗಿ,ಜೂ.13-ಮನೆ ಬೀಗ ಮುರಿದು 18,500 ರೂ.ಮೌಲ್ಯದ ಹಿತ್ತಾಳೆ ಮತ್ತು ತಾಮ್ರದ ಸಾಮಾನುಗಳು ಕಳವಾಗಿರುವ ಘಟನೆ ನಗರದ ಸುಂದರ ನಗರದಲ್ಲಿ ನಡೆದಿದೆ.
ಹೀನಾ ಕೌಸರ್ ಎಂಬುವವರ ಮನೆ ಬೀಗ ಮುರಿದು 4500 ರೂ.ಮೌಲ್ಯದ ಹಳೆಯ ಹಿತ್ತಾಳೆ ಹಾಂಡೆ, 4500 ರೂ.ಮೌಲ್ಯದ ಹಳೆಯ ಹಿತ್ತಾಳೆಯ ನೀರಿನ ಟಾಕಿ, 2500 ರೂ.ಮೌಲ್ಯದ ಹಳೆಯ ಹಿತ್ತಾಳೆ ಬಕೆಟ್, 2 ಸಾವಿರ ರೂ.ಮೌಲ್ಯದ ಹಳೆಯ ತಾಮ್ರದ ಹಂಡೆ, 3 ಸಾವಿರ ರೂ.ಮೌಲ್ಯದ ತಾಮ್ರದ ಕೊಡ ಸೇರಿದಂತೆ 18,500 ರೂ.ಮೌಲ್ಯದ ಹಿತ್ತಾಳೆ ಮತ್ತು ತಾಮ್ರದ ಸಾಮಾನು ಕಳವು ಮಾಡಲಾಗಿದೆ.
ಇವರು ಮನೆಗೆ ಬೀಗ ಹಾಕಿಕೊಂಡು ಸೊಲ್ಲಾಪುರದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.