
ನವಲಗುಂದ,ಜು.೨೬: ತಾಲ್ಲೂಕಿನ ನಾಗನೂರ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಮವಸ್ತç ವಿತರಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಪ್ರಧಾನಗುರು ಎನ್.ಎಸ್. ತಾಳಿಕೋಟಿಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ಎಸ್ .ಡಿ.ಎಂ.ಸಿ ಅಧ್ಯಕ್ಷ ಶೌಕತಅಲಿ. ಲಂಬೂನವರ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯೋಪಾದ್ಯಾಯರಾದ ಆರ್.ಆರ್.ವೈದ್ಯ ಸ್ವಾಗತ, ಎನ್.ಎಮ್ ಖಾಸಿಮಖಾನವರ ನಿರೂಪಣೆ
ಶಿಕ್ಷಕ ಎಮ್.ಡಿ ಬಾಗಬಾನ ವಂದಿಸಿದರು.
ಮುಹಮ್ಮದರಫೀಕ ಬೆಟಗೇರಿ, ಮುಹಮ್ಮದ ರಫೀಕ ದಿವಾನಸಾಬನವರ, ಗೈಬೂಸಾಬ ಬೋದಲೇಖಾನ, ಹೆಚ್.ಹೆಚ್ ದಿವಾನಸಾಬನವರ, ಎಫ್ ಎಸ್ ಮಕಾನದಾರ, ಎ.ಪಿ ನಾಶಿಪುಡಿ ಉಪಸ್ಥಿತರಿದ್ದರು.





























